Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಅಫ್ಘಾನ್- ಭಾರತ 3 ನೇ ಟಿ20: 2 ಬಾರಿ ಪಂದ್ಯ ಸಮಬಲ, 2 ನೇ ಸೂಪರ್ ಓವರ್ ನಲ್ಲಿ ಭಾರತಕ್ಕೆ ಗೆಲುವು!

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ- ಅಫ್ಘಾನಿಸ್ತಾನ ನಡುವಿನ 3ನೇ ಟಿ20 ಪಂದ್ಯವನ್ನು ಭಾರತ ಗೆದ್ದಿದೆ.ಈ ಮೂಲಕ ಭಾರತ 3 ಪಂದ್ಯಗಳ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿ ಅಫ್ಘಾನಿಸ್ತಾನಕ್ಕೆ 213 ರನ್ ಗಳ ಗುರಿ ನೀಡಿತ್ತು.

ಅಫ್ಘಾನಿಸ್ತಾನದ ಬ್ಯಾಟ್ಸ್ ಮನ್ ಗಳು ಭಾರತದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 212 ರನ್ ಗಳಿಸಿತು ಪರಿಣಾಮ ಪಂದ್ಯ ಸಮಬಲವಾಯಿತು. ಸೂಪರ್ ಓವರ್ ನಲ್ಲಿ ಅಫ್ಘಾನಿಸ್ಥಾನ ಒಂದು ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದರೆ, ಭಾರತ ಒಂದು ವಿಕೆಟ್ ನಷ್ಟಕ್ಕ 16 ರನ್ ಗಳಿಸಿ ಸೂಪರ್ ಓವರ್ ನಲ್ಲೂ ಪಂದ್ಯ ಸಮಬಲ ಕಂಡು ಅಚ್ಚರಿಯ ಫಲಿತಾಂಶ ಎದುರಾಯಿತು. ಎರಡನೇ ಸೂಪರ್ ಓವರ್ ನಲ್ಲಿ ಭಾರತ 2 ವಿಕೆಟ್ ಕಳಿಸಿ 11 ರನ್ ಗಳಿಸಿದರೆ,  ಅಫ್ಘಾನಿಸ್ಥಾನ 2 ವಿಕೆಟ್ ಕಳೆದುಕೊಂಡು 1 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಭಾರತದ ಪರ ರೋಹಿತ್ ಶರ್ಮಾ 69 ಎಸೆತಗಳಲ್ಲಿ 121 ರನ್ ರಿಂಕು ಸಿಂಗ್ 39 ಎಸೆತಗಳಲ್ಲಿ 69 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು,  ಬೌಲಿಂಗ್ ವಿಭಾಗದಲ್ಲಿ ವಾಷಿಂಗ್ ಟನ್ ಸುಂದರ್ 18 ರನ್ ಗಳನ್ನು ನೀಡಿ 3 ವಿಕೆಟ್ ಗಳನ್ನು ಪಡೆದರೆ, ಕುಲದೀಪ್ ಯಾದವ್ ಅವೇಶ್ ಖಾನ್ ತಲಾ 1 ವಿಕೆಟ್ ಪಡೆದರು.

No Comments

Leave A Comment