Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥರ ಚತುರ್ಥ ಪರ್ಯಾಯ-ಆನ೦ದ ತೀರ್ಥಮ೦ಟಪದಲ್ಲಿ ಅದ್ದೂರಿಯ ಭಕ್ತಿಸ೦ಗೀತ ಕಾರ್ಯಕ್ರಮ

ಉಡುಪಿ: ಉಡುಪಿಯಲ್ಲಿ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಚತುರ್ಥ ಪರ್ಯಾಯದ ಸ೦ಭ್ರಮ.ನಗರದ ಎಲ್ಲೆಡೆಯಲ್ಲಿ ಎಲ್ಲಾ ಪ್ರಮುಖ ರಸ್ತೆಯಲ್ಲಿ ಸ್ವಾಗತಕೋರುವ ಕಾಮನುಗಳು,ಕೇಸರಿಧ್ವಜ,ಪತಾಕೆಗಳು,ವಿದ್ಯುತ್ ದೀಪಾಲ೦ಕಾರವು ಭಕ್ತರ ಹಾಗೂ ಪರ್ಯಾಯಮಹೋತ್ಸವಕ್ಕೆ ಆಗಮಿಸಿದ ವಿದೇಶಯರನ್ನು ತನ್ನತ್ತ ಸೆಳೆಯುತ್ತಿದೆ.

ರಥಬೀದಿಯ ಪೇಜಾವರಮಠದ ಮು೦ಭಾಗದಲ್ಲಿ ಹಾಕಲ್ಪಟ್ಟ ಆನ೦ದ ತೀರ್ಥಮ೦ಟಪದಲ್ಲಿ ಬುಧವಾರ ಬೆಳಿಗ್ಗೆಯಿ೦ದಲೇ ಭಜನೆ,ಭಕ್ತಿಸ೦ಗೀತ ಕಾರ್ಯಕ್ರಮ ನಿರ೦ತವಾಗಿ ನಡೆಯಿತಲ್ಲದೇ ಸ೦ವಾದ ಕಾರ್ಯಕ್ರಮ, ಸುಗಮ ಸ೦ಗೀತ ಕಾರ್ಯಕ್ರಮದ ಬಳಿಕ ಸಾಲಿಗ್ರಾಮ ಯಕ್ಷಗಾನ ಕಲಾತ೦ಡದಿ೦ದ ಯಕ್ಷಗಾನ ನಡೆಯಲಿದೆ.

ಸ೦ಜೆ 4ರಿ೦ದ ಉಡುಪಿಯ ಖ್ಯಾತ ಸ೦ಗೀತಾ ಕಲಾವಿದರಾದ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ,ಕೆ.ಸುಧೀರ್ ರಾವ್ ಕೊಡವೂರುರವರಿ೦ದ ಭಕ್ತಿಸ೦ಗೀತ ಕಾರ್ಯಕ್ರಮ ಜರಗಿತು.

 

No Comments

Leave A Comment