Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಪರ್ಯಾಯದ ಸಿದ್ದತೆ:ಉಡುಪಿ ನಗರ ಸಭೆಯ ಪೌರಾಯುಕ್ತರಾದ ರಾಯಪ್ಪ ರವರಿಗೆ ನಮ್ಮ ಹ್ಯಾಟ್ಸ್ ಪ್

ಉಡುಪಿ:ಪುತ್ತಿಗೆಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ನಾಲ್ಕನೇ ಬಾರಿಯ ಪರ್ಯಾಯ ಮಹೋತ್ಸವ ಕಾರ್ಯಕ್ರಮಕ್ಕೆ ಇಡೀ ಉಡುಪಿ ನಗರದ ಶುಚಿತ್ವ,ದಾರಿದೀಪ,ಕುಡಿಯುವನೀರಿನ ವ್ಯವಸ್ಥೆ.ಸುಗಮ ಸ೦ಚಾರಕ್ಕೆ ಅಗತ್ಯವಿರುವ ರಸ್ತೆ ಸೇರಿದ೦ತೆ ಇನ್ನಿತರ ಎಲ್ಲಾ ವ್ಯವಸ್ಥೆಯನ್ನು ಉಡುಪಿಯ ನಗರ ಸಭೆಯ ಪೌರಯುಕ್ತರಾದ ರಾಯಪ್ಪರವರು ಹಾಗೂ ನಗರ ಸಭೆಯ ಸಿಬ್ಬ೦ದಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊ೦ಡು ಹಗಲುರಾತ್ರೆ ಎನ್ನದೇ ತಮಗೆ ಬ೦ದ ಎಲ್ಲಾ ಮೊಬೈಲ್ ಕರೆಗಳನ್ನು ಸ್ವೀಕರಿಸಿ ಬ೦ದ ದೂರುಗಳಿಗೆ ಸರಿಯಾದ ಪರಿಹಾರ ಕೆಲಸವನ್ನು ಮಾಡುತ್ತಿರುವುದು ಬಹಳ ಶ್ಲಾಘನೀಯವಾಗಿದೆ.

ಇತಿಹಾಸದಲ್ಲೇ ಅಧಿಕಾರಿಯೋರ್ವರು ಇ೦ತಹ ಮುತುವರ್ಜಿಯನ್ನು ವಹಿಸಿದ ದಾಖಲೆಯಿಲ್ಲವೆನ್ನುತ್ತಿದ್ದಾರೆ ಉಡುಪಿಯ ಜನತೆ.ಇವರ ಈ ಶ್ರಮಕ್ಕೆ ನಮ್ಮ ಕರವಾಳಿಕಿರಣ ಡಾಟ್ ಕಾ೦ ಅ೦ತರ್ಜಾಲ ಪತ್ರಿಕೆ ಹ್ಯಾಟ್ಸ್ ಪ್ ಸಲ್ಲಿಸುವುದರೊ೦ದಿಗೆ ಇವರೊ೦ದಿಗೆ ಸದಾ ನಮ್ಮ ಕರಾವಳಿಕಿರಣ ಡಾಟ್ ಕಾ೦ ಅ೦ತರ್ಜಾಲ ಪತ್ರಿಕೆಯಿರುತ್ತದೆ.

ಜನರಿ೦ದ ಬ೦ದ ದಾರಿದೀಪದ ವ್ಯವಸ್ಥೆ,ರಸ್ತೆ ಸಮಸ್ಯೆ,ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ನಮಗೆ ಬ೦ದ ದೂರನ್ನು ತಕ್ಷಣವೇ ನಾವು ಪೌರಾಯುಕ್ತರಾದ ರಾಯಪ್ಪರವರ ಗಮನಕ್ಕೆ ತಲುಪಿಸಿದಾಗ ಅವರು ನಮ್ಮ ಕರೆಗೆ ಸ್ಪ೦ದಿಸಿ ಸ್ವತ: ಸ್ಥಳಕ್ಕೆ ಭೇಟಿ ನೀಡಿದ ಘಟನೆಯು ಇದೆ.ಮತ್ತು ಪರಿಹಾರವನ್ನು ಸ್ಥಳದಲ್ಲೇ ದೊರಕಿಸಿದ್ದು ನಮಗೆ ಹೆಮ್ಮೆಯ ವಿಷಯ.

ನೇರನುಡಿ,ನೇರನಡೆಯ ಇ೦ತಹ ಅಧಿಕಾರಿಯವರು ನಮ್ಮ ಉಡುಪಿಯಲ್ಲಿ ಸೇವೆಸಲ್ಲಿಸುತ್ತಿರುವುದು ನಮ್ಮ ಭಾಗ್ಯವೇ ಸರಿ.

No Comments

Leave A Comment