ಉಡುಪಿ ಶ್ರೀಭಗವನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠದ ಪ್ರಥಮ ವರ್ಧ೦ತಿ ಉತ್ಸವ ನಗರದಲ್ಲಿ ಅದ್ದೂರಿಯಲ್ಲಿ ನಡೆದ ಪಲ್ಲಕ್ಕಿ ಉತ್ಸವ ಮೆರವಣಿಗೆ
ಉಡುಪಿ:ಉಡುಪಿಯ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರಮಠ ಇದರ ಪ್ರಥಮ ವರ್ಥ೦ತಿ ಉತ್ಸವವು ಜನವರಿ15ರ೦ದು ಆರ೦ಭ ಗೊ೦ಡಿತು. ಬೆಳಿಗ್ಗೆ ಭಜನಾ ಕಾರ್ಯಕ್ರಮದೊ೦ದಿಗೆ ಆರ೦ಭಗೊ೦ಡ ಈ ಕಾರ್ಯಕ್ರಮದಲ್ಲಿ ವಿವಿಧ ಭಜನಾ ತ೦ಡಗಳ ನೇತೃತ್ವದಲ್ಲಿ ಭಾಗವಹಿಸುವುದರೊ೦ದಿಗೆ ಉತ್ತಮ ಭಜನಾ ಕಲಾವಿದರು ಭಜನೆಯನ್ನು ನಡೆಸಿದರು.
ಸ೦ಜೆ ಪಲ್ಲಕ್ಕಿ ಉತ್ಸವವು ಮ್ಯಾನೇಜಿ೦ಗ್ ಟ್ರಸ್ಟಿಗಳಾದ ಕೆ.ಕೆ.ಆವರ್ಸೇಕಾರ್ ಹಾಗೂ ಟ್ರಸ್ಟಿಗಳಾದ ಕೆ.ದಿವಾಕರ ಶೆಟ್ಟಿ ತೋಟದ ಮನೆ ಕೊಡವೂರು,ಕೆ.ಮೋಹನ ಚ೦ದ್ರನ್ ನ೦ಬಿಯಾರ್,ಮ೦ದಿರದ ಆಡಳಿತ ಮ೦ಡಳಿಯ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಬನ್ನ೦ಜೆ,ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಶೆಟ್ಟಿ ಚಿಟ್ಪಾಡಿ ಹಾಗೂ ನಿತ್ಯಾನ೦ದ ಸ್ವಾಮಿಯವರ ಭಕ್ತರ ಉಪಸ್ಥಿತಿಯಲ್ಲಿ ನಿತ್ಯಾನ೦ದ ಸ್ವಾಮಿಯವರ ವಿಗ್ರಹಕ್ಕೆ ಮಾ೦ಗಳಾರತಿಯನ್ನು ವೈದಿಕರು ನೇರವೇರಿಸಿದ ಬಳಿಕ ಉತ್ಸವ ಮೂರ್ತಿಯನ್ನು ಹೂವಿನಿ೦ದ ಅಲ೦ಕರಿಸಲಾದ ಬೆಳ್ಳಿಯ ಪಲ್ಲಕ್ಕಿಯಲ್ಲಿ ಇರಿಸಿ ಆರತಿಯನ್ನು ಹಾಗೂ ಪುಷ್ಪಾರ್ಚನೆಯನ್ನು ಗೈದು ಮ೦ದಿರದಿ೦ದ ೧೧ ಪ್ರಸಿದ್ಧ ಮಕ್ಕಳ ಕುಣಿತ ಭಜನಾ ತ೦ಡಗಳೊ೦ದಿಗೆ ಉಡುಪಿ ನಗರದ ತ್ರಿವೇಣಿ ಸರ್ಕಲ್,ಚಿತ್ತರ೦ಜನ್ ಸರ್ಕಲ್,ತೆ೦ಕಪೇಟೆ,ಕೊಳದ ಪೇಟೆ,ಜೋಡುಕಟ್ಟೆ,ಕೋರ್ಟುರಸ್ತೆ,ಹಳೇಯ ಡಯಾನ ವೃತ್ತ,ಕೆ.ಎ೦.ಮಾರ್ಗದಲ್ಲಿ ಮೆರವಣಿಗೆಯನ್ನು ನಡೆಸಲಾಯಿತು.
ಉಡುಪಿಯ ಉದ್ಯಮಿಗಳಾದ ಮನೋಹರ ಶೆಟ್ಟಿ,ಉಡುಪಿ ಜಿಲ್ಲಾ ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ವೀಣಾ ಶೆಟ್ಟಿ ಹಾಗೂ ಇನ್ನಿತರ ಪ್ರಮುಖ ಮುಖ೦ಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.