Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

40 ಶೇಕಡ ಹಣ ಸಿಗದೆ ಮೆಂಟಲ್ ಗಳಂತೆ ವರ್ತಿಸುತ್ತಿರುವವರು ರಾಜ್ಯ ಬಿಜೆಪಿ ನಾಯಕರುಗಳು-ಸುರೇಶ್ ಶೆಟ್ಟಿ ಬನ್ನಂಜೆ .

ಉಡುಪಿ:ಕಾಂಗ್ರೆಸ್ ಸರಕಾರ ನೀಡುತ್ತಿರುವ ಉಚಿತ ಯೋಜನೆಗಳ ಬಗ್ಗೆ ಈ ಬಿಜೆಪಿಯವರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೀಡುತ್ತಿರುವ ಜವಾಬ್ದಾರಿಯ ಬಗ್ಗೆ ತಮ್ಮ ಹುಚ್ಚು ಆಕ್ಷೇಪವನ್ನು ಮಾಡುತ್ತಿದ್ದಾರೆ. ಈ ಬಿಜೆಪಿ ನಾಯಕರುಗಳಿಗೆ ಹಣಗಳಿಸುವುದು ಮುಖ್ಯ ಉದ್ದೇಶವಾಗಿದೆ. ಕೋವಿಡ್ ಸಂದರ್ಭದಲ್ಲಿ ಎಷ್ಟು ಸಾವಿರ ಕೋಟಿ ಲೂಟಿ ಮಾಡಿದ್ದಾರೆ೦ಬುದು ಬಿಜೆಪಿ ನಾಯಕರಾದ ಬಸವನ ಗೌಡಪಾಟೀಲ್ ಯತ್ನಾಳ್ ರವರೆ ಈ ಬಿಜೆಪಿ ನಾಯಕರುಗಳ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಎಳೆಎಳೆಯಾಗಿ ಬಿಡಿಸಿ ಇಟ್ಟಿದ್ದಾರೆ.

ಇದೀಗ ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ಕೊಡುತ್ತಿರುವ ಉಚಿತ ಯೋಜನೆಗಳನ್ನು ಸಂಪೂರ್ಣ ವಿರೋಧಿಸುತ್ತಾ ರಾಜ್ಯದ ಜನರಿಗೆ ಈ ಯೋಜನೆಗಳು ಸಿಗದಂತೆ ಮಾಡುವ ಕಾರ್ಯಕ್ರಮವನ್ನು ಈ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ತಮ್ಮ ಕಾರ್ಯಕರ್ತರಿಗೆ ಅಧಿಕಾರವನ್ನು ನೀಡಲು ಬಯಸಿದ್ದು ಅದರ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ದೇಶದ ರೈತರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇರುವಷ್ಟು ಕಾಳಜಿ ಈ ಬಿಜೆಪಿ ನಾಯಕರುಗಳಿಗೆ ಇದೆಯಾ ರಾಷ್ಟ್ರದ ರಾಜಧಾನಿಯಲ್ಲಿ ದೇಶದ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ತಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದರು ಅದನ್ನು ಕ್ಯಾರೆ ಎನ್ನದೆ ರೈತರನ್ನು ಕಳೆಗಣಿಸಿದ್ದು ಮೋದಿ ಸರಕಾರವಲ್ಲವೇ ಅದೇ ರೀತಿಯಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಮೇಲೆ ಗೋಲಿಬಾರ್ ಮಾಡಿ ರೈತರ ಸಾವಿಗೆ ಕಾರಣಕರ್ತರಾದದ್ದು ಇದೇ ಬಿಜೆಪಿ ಸರಕಾರವಲ್ಲವೇ ರಾಜ್ಯದ ಬಿಜೆಪಿ ನಾಯಕರುಗಳು ಈ ಬಗ್ಗೆ ಯೋಚಿಸಿ ನೀವು ಮಾಡಿದ ತಪ್ಪುಗಳನ್ನು ಮರೆಮಾಚಲು ಹಾಗೂ 40% ಕಮಿಷನ್ ಸಿಗದೇ ಕಂಗಾಲಾಗಿ ರಾಜ್ಯದ ಜನರಿಗೆ ಉಚಿತ ಯೋಜನೆ ಸಿಗದಂತೆ ಮಾಡಲು ಈ ಬಿಜೆಪಿ ನಾಯಕರುಗಳು ಹಾ ತೊರೆಯುತ್ತಿದ್ದಾರೆ,

ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಜವಾಬ್ದಾರಿ ನೀಡುವುದು ಅಥವಾ ಅಧಿಕಾರ ನೀಡುವುದು ನಮ್ಮ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಅದನ್ನು ಕೇಳಲು ಬಿಜೆಪಿ ನಾಯಕರು ಯಾರು ನಿಮಗೆ ತಾಕತ್ತಿದ್ದರ ಕೇಂದ್ರದಲ್ಲಿ ಮೋದಿ ನೇತೃತ್ವದ ನಿಮ್ಮದೇ ಬಿಜೆಪಿ ಸರಕಾರ ಇದೆ ನಿಮಗೆ ತಾಕತ್ತಿದ್ದರೆ ಬಿಜೆಪಿ ಕಾರ್ಯಕರ್ತರಿಗೆ ಕೇಂದ್ರ ಸರಕಾರದಿಂದ ಅಧಿಕಾರ ಅಥವಾ ಜವಾಬ್ದಾರಿಯನ್ನು ನೀಡಿ ರಾಜ್ಯದ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಅಶೋಕ್ ರವರೇ ನಿಮ್ಮ ಕಾರ್ಯಕರ್ತರಿಗೂ ಸ್ವಲ್ಪ ಬಿರಿಯಾನಿ ತಿನ್ನಿಸಿ ಅದನ್ನು ಬಿಟ್ಟು ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷದ ಸರ್ಕಾರ ವಿರುದ್ಧ ಅನಗತ್ಯಟೀಕೆಗಳನ್ನು ಮಾಡಿ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯುವಂತಹ ಕೆಲಸವನ್ನು ಮಾಡಬೇಡಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ

No Comments

Leave A Comment