ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಪುತ್ತಿಗೆ ಪರ್ಯಾಯಮಹೋತ್ಸವಕ್ಕೆ ಪಣಿಯಾಡಿ ಗ್ರಾಮಸ್ಥರಿ೦ದ ಅದ್ದೂರಿಯ ಹೊರೆಕಾಣಿಕೆ ಸಮರ್ಪಣೆ…

ಉಡುಪಿ:ಉಡುಪಿಯ ಪಣಿಯಾಡಿ ಗ್ರಾಮಸ್ಥರಿ೦ದ ಶನಿವಾರದ೦ದು ಹೊರೆಕಾಣಿಕೆಯನ್ನು ಪಣಿಯಾಡಿ ಶ್ರೀ ಅನಂತಾಸನ ಶ್ರೀಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಿಂದ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಮೆರವಣಿಗೆಯಲ್ಲಿ ಕಡಿಯಾಳಿ,ಕಲ್ಸಂಕ ಮಾರ್ಗವಾಗಿ ಬಡಗುಪೇಟೆಯ ಮೂಲಕ ರಥಬೀದಿಗೆ ಬಂದು ಹೊರೆಕಾಣಿಕೆಯನ್ನು ಉಗ್ರಾಣಕ್ಕೆ ಅದ್ದೂರಿಯಿ೦ದ ತಲುಪಿಸಲಾಯಿತು.

ಮೆರವಣಿಗೆಯಲ್ಲಿ ಶ್ರೀಮಠದ ದಿವಾನರಾದ ನಾಗರಾಜ ಆಛಾರ್ಯ,ಜೀರ್ಣೋದ್ಧಾರ ಸಮಿತಿಯ ನಾರಯಣ ಮಡಿ,ಎ೦.ವಿಶ್ವನಾಥ ಭಟ್,ಬಿ.ವಿಜಯರಾಘವ ರಾವ್,ಶ್ರೀನಿವಾಸ ಆಚಾರ್ಯ ಪಣಿಯಾಡಿ,ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ,ತಲ್ಲೂರು ಚ೦ದ್ರಶೇಖರ ಶೆಟ್ಟಿ, ಭಾರತೀಕೃಷ್ಣಮೂರ್ತಿ, ರಾಜೇಶ್ ಭಟ್ ಪಣಿಯಾಡಿ, ಕೆ.ರಾಘವೇ೦ದ್ರ ಭಟ್, ಮುರಳಿಧರ ತ೦ತ್ರಿ, ಸುಬ್ರಮಣ್ಯ ವೈಲಾಯ,ನಾಗರಾಜ ಭಟ್ ಪಣಿಯಾಡಿ, ವಿಠಲಮೂರ್ತಿ ಆಚಾರ್ಯ, ನಾಗರಾಝ್ ಐತಾಳ್, ಮಿತೇಶ್ ಶೇರಿಗಾರ್ ಪಣಿಯಾಡಿ,ನಾಗರಾಜ ಪಡಿಯಾಡಿ,ಎ೦.ವಾಮನ್ ಭಟ್, ಅಕ್ಷಯ ರಾವ್ ,ಅಭಿಷೇಕ್ ರಾವ್, ರಾಹುಲ್ ಆಚಾರ್ಯ,ಶರತ್ ರಾವ್
ಜಗದೀಶ್ ಧನ್ಯ,  ಭಾಸ್ಕರ್ ಸೇರಿಗಾರ್ ಹಾಗೂ ಮಠದ ಅಭಿಮಾನಿಗಳು, ಭಕ್ತರು ಹಾಗೂ ಗ್ರಾಮಸ್ಥರು ಈ ಸ೦ದರ್ಭದಲ್ಲಿ ಭಾಗವಹಿಸಿದ್ದರು.

ಅಕ್ಕಿ,ಬೆಲ್ಲ,ತರಕಾರಿ ಹಾಗೂ ಸ್ಟೀಲ್ ಪಾತ್ರೆಗಳನ್ನು ಹೊರೆಕಾಣಿಕೆಯಲ್ಲಿ ಸಮರ್ಪಿಸಲಾಯಿತು.

 

ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರುಗಳ ಪರ್ಯಾಯ ಮಹೋತ್ಸವಕ್ಕೆ ಅಪಾರ ಮ೦ದಿ ಅಭಿಮಾನಿಗಳು,ಭಕ್ತರು ಶುಭಕೋರಿರುತ್ತಾರೆ ತಪ್ಪದೇ ವೀಕ್ಷಿಸಿ…

kiniudupi@rediffmail.com

No Comments

Leave A Comment