Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕಾಂಗ್ರೆಸ್ ಮುಖಂಡರೇ ಉಡುಪಿ ನಗರಸಭೆ ವಿಷಯದಲ್ಲಿ ಪ್ರಸಾದ್ ಕಾಂಚನ್ ರವರಿಗೆ ಮಾಹಿತಿ ನೀಡಿ : ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ

ಉಡುಪಿ:ಕಳೆದ ಏಪ್ರಿಲ್ ತಿಂಗಳಿನಿಂದ ಉಡುಪಿ ನಗರಸಭೆಯಲ್ಲಿ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಡಳಿತ ನಡೆಸುತ್ತಿದ್ದು, ನಗರ ಸಭೆಯ ಚುನಾಯಿತ ಸದಸ್ಯರ ಕೌನ್ಸಿಲ್ ಅಧಿಕಾರ ನಡೆಸುತ್ತಿಲ್ಲ. ಈ ಬಗ್ಗೆ ಮಾಹಿತಿ ಇಲ್ಲದ ಪ್ರಸಾದ್ ಕಾಂಚನ್ ರವರು ಉಡುಪಿ ನಗರ ಸಭೆ ಬಿಜೆಪಿ ಆಡಳಿತ ನಡೆಸುತ್ತಿದೆ ಎಂಬ ಬಾಲಿಶ ಹೇಳಿಕೆಯಿಂದ ತಮ್ಮ ರಾಜಕೀಯ ಅಜ್ಞಾನವನ್ನು ಜನತೆಯ ಮುಂದಿಟ್ಟಿದ್ದಾರೆ, ಕಾಂಗ್ರೆಸ್ ಮುಖಂಡರು ಅವರಿಗೆ ಸರಿಯಾಗಿ ಮಾಹಿತಿ ನೀಡಿ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ತಿರುಗೇಟು ನೀಡಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯವರ ಕಾರ್ಯವೈಖರಿ ಬಗ್ಗೆ ಮಾತಾಡುವ ಪ್ರಸಾದ್ ಕಾಂಚನ್ ರವರಿಗೆ ಮಾಹಿತಿ ಕೊರತೆ ಇದೆ. ಬ್ರಹ್ಮಾವರ ಪಾಸ್ ಪೋರ್ಟ್ ಕಚೇರಿ, ಕೇಂದ್ರೀಯ ವಿದ್ಯಾಲಯ ಕಟ್ಟಡ, ಶೀಘ್ರದಲ್ಲೇ ಶಂಕುಸ್ಥಾಪನೆ ನಡೆಯಲಿರುವ ಇ ಎಸ್ ಐ ಆಸ್ಪತ್ರೆ, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮೊದಲಾದ ಹತ್ತು ಹಲವು ಯೋಜನೆಗಳನ್ನು ಕ್ಷೇತ್ರಕ್ಕೆ ತರುವಲ್ಲಿ ಶೋಭಾ ಕರಂದ್ಲಾಜೆ ಯವರ ಪ್ರಯತ್ನ ಹಾಗೂ ಶ್ರಮವಿದೆ ಎಂಬುದು ಜನತೆಗೆ ತಿಳಿದಿದೆ.

ಕೇಂದ್ರ ಸರಕಾರದ ಹತ್ತು ಹಲವು ಯೋಜನೆಗಳನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿದ್ದು, ನರೇಂದ್ರ ಮೋದಿ ಸಚಿವ ಸಂಪುಟದ ಕ್ರಿಯಾಶೀಲ ಸಚಿವರಲ್ಲಿ ಓರ್ವರಾಗಿ ದೇಶದಾದ್ಯಂತ ತಮ್ಮ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯಲ್ಲಿ ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಿ ಸಕ್ರಿಯವಾಗಿರುವುದು ನಮ್ಮ ಉಡುಪಿ ಚಿಕ್ಕಮಗಳೂರಿನ ಜನತೆಗೆ ಹೆಮ್ಮೆತಂದಿದೆ.

ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿರುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಪ್ರಶ್ನೆ ಮಾಡುವುದು ನಮ್ಮ ಕರ್ತವ್ಯ.

ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ಕರ್ತವ್ಯ ಹಾಗೂ ಸಂಸದೆ, ಕೇಂದ್ರ ಸಚಿವರ ಜವಾಬ್ದಾರಿ ಕರ್ತವ್ಯಗಳ ಬಗ್ಗೆ ಮೊದಲು ಅರಿತು ಪ್ರಸಾದ್ ಕಾಂಚನ್ ಪ್ರಶ್ನೆ ಮಾಡಲಿ..

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಉಡುಪಿ ನಗರಸಭೆ ಭ್ರಷ್ಟಾಚಾರದ ಕೂಪವಾಗಿದ್ದು, ಅಧಿಕಾರಿಗಳು ಸ್ಥಳೀಯ ಕಾಂಗ್ರೆಸ್ ನಾಯಕರ ಚೇಲಾಗಳಂತೆ ವರ್ತಿಸುತ್ತಿದ್ದು ಜನತೆ ಬೇಸತ್ತ ಪರಿಣಾಮವಾಗಿ ಪೆರಂಪಳ್ಳಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಉತ್ತರ ನೀಡಿದ್ದಾರೆ, ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No Comments

Leave A Comment