
ಕೋವಿಡ್-19 ಭೀತಿ: ಶೀತ ಕೆಮ್ಮನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಇದು ಈಗ ಸಾಮಾನ್ಯವಲ್ಲ: ವೈದ್ಯರ ಎಚ್ಚರಿಕೆ
ಬೆಂಗಳೂರು: ಕೋವಿಡ್-19 ಹೆಚ್ಚಳ ಭೀತಿ ನಡುವೆಯೇ ಶೀತ ಮತ್ತು ಕೆಮ್ಮನ್ನು ಲಘುವಾಗಿ ತೆಗೆದುಕೊಳ್ಳಬೇಡಿ.. ಅವುಗಳು ಈಗ ಸಾಮಾನ್ಯ ರೋಗ ಲಕ್ಷಣಗಳಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವೈದ್ಯರು ಮತ್ತು ಅಧಿಕಾರಿಗಳು ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ಇನ್ನು ಮುಂದೆ ಶೀತ ಮತ್ತು ಕೆಮ್ಮನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ. ರೋಗಿಗಳ ಬಗ್ಗೆ ಸಂವೇದನಾಶೀಲರಾಗಿರಲು ಮತ್ತು ಅವರ ಕಳವಳಗಳನ್ನು ಅರ್ಥಮಾಡಿಕೊಳ್ಳಲು ವೈದ್ಯರಿಗೆ ಭಾರತೀಯ ವೈದ್ಯಕೀಯ ಸಂಘ (IMA) ಕೇಳುತ್ತಿದೆ. ವೈರಾಲಜಿಸ್ಟ್‌ಗಳು ಮತ್ತು ಶ್ವಾಸಕೋಶಶಾಸ್ತ್ರಜ್ಞರು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವ ಜನರ ಪ್ರಕರಣಗಳಲ್ಲಿ ಹೆಚ್ಚಳವನ್ನು ವರದಿ ಮಾಡುತ್ತಿರುವ ಸಮಯದಲ್ಲೇ ಐಎಂಎ ಎಚ್ಚರಿಕೆ ಕುತೂಹಲ ಕೆರಳಿಸಿದೆ.
ವೈರಾಲಜಿಸ್ಟ್‌ಗಳು ವೈರಸ್ಗಳ ರೂಪಾಂತರಗಳ ಹೆಚ್ಚಳ ಕುರಿತು ಮಾಹಿತಿ ನೀಡುತ್ತಿದ್ದು, ಸರ್ಕಾರ ಮತ್ತು ಅಧಿಕಾರಿಗಳು ಕೇವಲ ಕೋವಿಡ್ನ ಬಗ್ಗೆ ಕಾಳಜಿ ವಹಿಸುತ್ತಾರೆ, ಆದರೆ ವಾಸ್ತವದಲ್ಲಿ ವೈರಸ್ಗಳಲ್ಲಿ ಹಲವು ರೂಪಾಂತರಗಳಿವೆ. ಅಲ್ಲಿ ಕಾಳಜಿ ಹೆಚ್ಚುತ್ತಿದೆ. ವೈರಲ್ ಔಷಧಿಗಳಲ್ಲಿ ಸ್ವಲ್ಪ ಆಯ್ಕೆಗಳಿವೆ. ಹೀಗಾಗಿ ಸ್ಟೀರಾಯ್ಡ್‌ಗಳು ಮತ್ತು ಆ್ಯಂಟಿಬಯೋಟಿಕ್‌ಗಳ ಬಳಕೆ ಹೆಚ್ಚಾಗುತ್ತಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.