ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಉಡುಪಿ ನಗರಸಭೆಯಲ್ಲಿ ಬಡವರಿಗೊಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯವೇ?- ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ:ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಈಗ ಹೊಸದಾಗಿ ಕುಡಿಯುವ ನಳ್ಳಿ ನೀರಿನ ಕನೆಕ್ಷನಿಗೆ ಅವಕಾಶ ಇಲ್ಲ ಸಾರ್ವಜನಿಕರು ಬಡವರು ಹೊಸದಾಗಿ ನಳ್ಳಿ ನೀರಿನ ಜೋಡಣೆಗೆ ಅರ್ಜಿ ಸಲ್ಲಿಸಿದರೆ ಈಗ ಸಿಗುವುದಿಲ್ಲ ಎಂಬ ಉತ್ತರ ಉಡುಪಿ ನಗರಸಭೆಯ ಅಧಿಕಾರಿಗಳಿಂದ ಬರುತ್ತದೆ.
ಆದರೆ ನಿನ್ನೆ ದಿನ ಉಡುಪಿಯಲ್ಲಿ ಕಾರ್ಯಚರಿಸುತ್ತಿರುವ ಜಯಲಕ್ಷ್ಮಿ ಸಿಲ್ಕ್ ಇವರಿಗೆ ಇವರ ಕಟ್ಟಡಕ್ಕೆ ಇವರ ಪಾರ್ಕಿಂಗ್ ಪ್ರದೇಶದ ಪಕ್ಕದಿಂದ ಅಂದರೆ ಜಯಲಕ್ಷ್ಮಿ ಸಿಲ್ಕ್ ನ ಹಿಂಬದಿಯಿಂದ ಹೊಸದಾಗಿ ನಳ್ಳಿ ನೀರಿನ ಕನೆಕ್ಷನ್ ಅನ್ನು ಪಡೆದುಕೊಂಡಿರುತ್ತಾರೆ ಅದು ಕೂಡ ಒಂದೇ ಬಾರಿ ಐದು ಕನೆಕ್ಷನ್ ಅನ್ನು ಪಡೆದುಕೊಂಡಿರುತ್ತಾರೆ.ಇದಕ್ಕೆ ಅವಕಾಶವನ್ನು ನೀಡಿದವರು ಯಾರು ಈ ನಳ್ಳಿ ನೀರಿನ ಕನೆಕ್ಷನ್ ಅಧಿಕೃತವೋ ಅಥವಾ ಅನಾದಿಕೃತವು? ಅಧಿಕೃತ ಎಂದಾದರೆ ಎಲ್ಲರಿಗೂ ಅರ್ಜಿ ಸಲ್ಲಿಸಿದವರಿಗೆ ಹೊಸದಾಗಿ ನಳ್ಳಿ ನೀರಿನ ಕನೆಕ್ಷನ್ ಅನ್ನು ನಗರಸಭೆಯ ಆಯುಕ್ತರು ಕೊಡಬೇಕಾಗಿ ಉಡುಪಿಯ ಜನತೆಯ ಪರವಾಗಿ ಮನವಿಯನ್ನು ಮಾಡುತ್ತೇನೆ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.