ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಲಕ್ಷದ್ವೀಪದಲ್ಲಿ ಸ್ನಾರ್ಕ್ಲಿಂಗ್ ಮಾಡಿದ ಪೋಟೋ ಹಂಚಿಕೊಂಡ ಪ್ರಧಾನಿ

ನವದೆಹಲಿ:ಜ 04: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದಾಗ ಸಂದರ್ಭದಲ್ಲಿ ಸ್ನಾರ್ಕ್ಲಿಂಗ್ ಪ್ರಯತ್ನಿಸಿದ “ಉಲ್ಲಾಸದಾಯಕ ಅನುಭವಗಳ”ಝಲಕ್ ಗಳನ್ನು ಗುರುವಾರ ಹಂಚಿಕೊಂಡಿದ್ದಾರೆ.

ಈ ಭೇಟಿ ಸಂದರ್ಭ ಪೋಟೋಗಳನ್ನು ಪ್ರಧಾನಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ಸಾಹಸ ಮಾಡಲು ಬಯಸುವವರ ಪಟ್ಟಿಯಲ್ಲಿ ಲಕ್ಷದ್ವೀಪ ಇರಬೇಕು. ನಾನು ಸ್ನಾರ್ಕ್ಲಿಂಗ್ ಪ್ರಯತ್ನಿಸಿದೆ. ಅದೊಂದು ಸಂತಸದ ಅದ್ಬುತ ಅನುಭವ” ಎಂದು ಸಲಹೆ ನೀಡಿದ್ದಾರೆ.

ಹವಳಗಳು ಮತ್ತು ಮೀನುಗಳ ಸಮೇತ ಪ್ರವಾಸದ ಫೋಟೋವನ್ನು ಹಂಚಿಕೊಳ್ಳುವಾಗ, ಲಕ್ಷದ್ವೀಪವು ಕೇವಲ ದ್ವೀಪಗಳ ಸಮೂಹವಲ್ಲ  ಇದು ಸಂಪ್ರದಾಯಗಳ ಪರಂಪರೆ ಮತ್ತು ಅದರ ಜನರ ಆತ್ಮಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

ಅಗತ್ತಿ, ಬಂಗಾರಂ ಮತ್ತು ಕವರಟ್ಟಿಯಲ್ಲಿ ಜನರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿತು. ನಾನು ದ್ವೀಪದ ಜನರಿಗೆ ಧನ್ಯವಾದ ಹೇಳುತ್ತೇನೆ. ಅಭಿವೃದ್ಧಿಯ ಮೂಲಕ ಜನರ ಬದುಕನ್ನು ಮೇಲಕ್ಕೆತ್ತುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಪ್ರಧಾನಿ ತಮ್ಮ ಭೇಟಿ ವೇಳೆ ಹೇಳಿದ್ದರು.

No Comments

Leave A Comment