Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಲೋಕಸಭೆಯಲ್ಲಿ ಇಂಟರ್‌ಪ್ರಿಟರ್‌ ಆಗಿ ಸುಪ್ರೀತಾ ಹೆಬ್ಬಾರ್‌ ನೇಮಕ

ಉಡುಪಿ:ಲೋಕಸಭೆಯಲ್ಲಿ ಏಕಕಾಲಿಕ ವ್ಯಾಖ್ಯಾನಕಾರ (ಕನ್ಸಲ್ಟೆಂಟ್‌ ಇಂಟರ್‌ಪ್ರಿಟರ್‌ ) ಹುದ್ದೆಗೆ ಪತ್ರಕರ್ತೆ ಸುಪ್ರೀತಾ ಹೆಬ್ಬಾರ್‌ ನೇಮಕಗೊಂಡಿದ್ದಾರೆ.

ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಶಿವಪುರದ ಇವರು ಸುಮಾರು 15 ವರ್ಷ ವಿವಿಧ ರಾಜ್ಯಮಟ್ಟದ ಸುದ್ದಿಸಂಸ್ಥೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಆಟೊಮೊಬೈಲ್‌ ಪತ್ರಕರ್ತೆಯಾಗಿ, “ಡ್ರೈವ್‌ ದಿ ಫೇಮ್”‌ ಎಂಬ ಹೆಸರಿನ ಆಟೊಮೊಬೈಲ್‌ ಯೂಟ್ಯೂಬ್‌ ಚಾನೆಲ್‌ ಹಾಗೂ “ಸೌತ್‌ ಗರ್ಲ್‌ ಇನ್‌ ನಾರ್ತ್‌” ಎಂಬ ಚಾನೆಲ್‌ ಅನ್ನು ಮುನ್ನಡೆಸುತ್ತಿದ್ದಾರೆ.

ಸದ್ಯ ದೆಹಲಿಯಲ್ಲಿ ನೆಲೆಸಿರುವ ಸುಪ್ರೀತಾ, ಸಂಸತ್ತಿನ ಲೋಕಸಭಾ ಅಧಿವೇಶನದ ಕಲಾಪಗಳನ್ನು ಆಂಗ್ಲ ಮತ್ತು ಹಿಂದಿ ಭಾಷೆಯಿಂದ ಕನ್ನಡ ಭಾಷೆಗೆ ಏಕಕಾಲಕ್ಕೆ ವ್ಯಾಖ್ಯಾನಿಸುವ ದುಭಾಷಿ (ಇಂಟರ್‌ಪ್ರಿಟರ್‌) ಆಗಿ ನೇಮಕಗೊಂಡಿದ್ದಾರೆ. ಈಗಷ್ಟೇ ಮುಗಿದ ಚಳಿಗಾಲದ ಅಧಿವೇಶನದಲ್ಲಿ ಇವರು ವ್ಯಾಖ್ಯಾನಕಾರರಾಗಿ ಕೆಲಸ ಮಾಡಿದ್ದಾರೆ.

No Comments

Leave A Comment