Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿಯ ಖ್ಯಾತ ಬಿ.ಜೆ.ಪಿ ರಾಜಕಾರಣಿ,ಹೊಟೇಲ್ ಉದ್ಯಮಿಗಳಾದ ಬಿ.ಸುಧಾಕರ ಶೆಟ್ಟಿ ಹೃದಯಾಘಾತದಿ೦ದ ನಿಧನ…

ಉಡುಪಿ: ಜ.4: ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡರಾಗಿದ್ದ ಹಾಗೂ ಹೊಟೇಲ್ ಉದ್ಯಮವನ್ನು ನಡೆಸುತ್ತಿದ್ದ ಖ್ಯಾತ ಉದ್ಯಮಿಗಳಾಗಿ ಜನಾನುರಾಗಿಯಾಗಿದ್ದ ಬಿ.ಸುಧಾಕರ್ ಶೆಟ್ಟಿ(72) ಇಂದು (ಗುರುವಾರದ೦ದು)ಬೆಳಗ್ಗೆ ಹೃದಯಾಘಾತದಿ೦ದಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕರಾವಳಿ ಬೈಪಾಸ್ ನಲ್ಲಿರುವ ಶಾರದಾ ಇಂಟರ್ ನ್ಯಾಶನಲ್ ಹೊಟೇಲ್ ಮಾಲಕರಾಗಿದ್ದ ಬಿ.ಸುಧಾಕರ್ ಶೆಟ್ಟಿ ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದರು.ಉಡುಪಿ ನಗರ ಸಭೆಯ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿ,.2009ರಿಂದ 2012ರವರೆಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 1999ರಲ್ಲಿ ಯು.ಆರ್.ಸಭಾಪತಿ ವಿರುದ್ಧ ಸ್ಪರ್ಧೆಗೆ ನಿ೦ತಿದ್ದರು.

2004ರ ಚುನಾವಣೆಯಲ್ಲಿ ಟಿಕೆಟ್ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2013ರ ಚುನಾವಣೆಯಲ್ಲಿ ಬಿ.ಸುಧಾಕರ್ ಶೆಟ್ಟಿ ಕಣಕ್ಕಿಳಿದಿದ್ದರು. ಬಿಜೆಪಿ ಪಕ್ಷದವಿವಿಧ ಹುದ್ದೆಗಳನ್ನು ಅವರು ಅಲಂಕರಿಸಿದ್ದರು.
ಇ೦ಟರ್ ನ್ಯಾಷನಲ್ ವಾಲಿಬಾಲ್ ಕ್ರೀಡೆಯನ್ನು ಉಡುಪಿಯ ಅಜ್ಜರಕಾಡುಮೈದಾನ ಹಾಗೂ ಮಣಿಪಾಲದ ಕೆ ಎ೦.ಸಿ ಕ್ರೀಡಾ೦ಗಡದಲ್ಲಿ ನಡೆಸಿದ್ದರು.ಎಲ್ಲರಿಗೂ ಅಚ್ಚುಮೆಚ್ಚಿನ ರಾಜಕೀಯ ವ್ಯಕ್ತಿಯಾಗಿದ್ದರು.

ಉಡುಪಿ ಜಿಲ್ಲಾ ವೈನ್ ಮರ್ಚ೦ಟ್ಸ್ ಸ೦ಘಟನೆಯಲ್ಲಿಯೂ ಇವರು ಖ್ಯಾತಿಹೊ೦ದಿದ್ದು ಜಿಲ್ಲೆಯ ಎಲ್ಲಾ ಮಧ್ಯಮಾರಾಟಗಾರಿಗೆ ಬೆನ್ನೆಲುಬಾಗಿದ್ದರು.ಕೊಡುಗೈದಾನಿಯೂ ಇವರಾಗಿದ್ದರು.

ಇವರ ಪತ್ನಿ,ಇಬ್ಬರು ಪುತ್ರರನ್ನು ಒಬ್ಬ ಮಗಳನ್ನು,ಸೊಸೆಯನ್ನು,ಅಳಿಯನನ್ನು, ಅಣ್ಣ,ಅತ್ತಿಗೆಯವರನ್ನು ಹಾಗೂ ಅಪಾರ ಬ೦ಧುವರ್ಗದವರನ್ನು ಬಿಟ್ಟು ಅಗಲಿದ್ದಾರೆ.

ಮೃತರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿಅಧ್ಯಕ್ಷರು,ಜಿಲ್ಲಾ ಪದಾಧಿಕಾರಿಗಳು,ಮಹಿಳಾ ಮೋರ್ಚಾದ ಅಧ್ಯಕ್ಷರು ಎಲ್ಲಾ ಪದಾಧಿಕಾರಿಗಳು,ಎಲ್ಲಾ ಐದುಮ೦ದಿ ವಿಧಾನ ಸಭೆಯ ಸದಸ್ಯರು,ಸ೦ಸದೆ ಶೋಭಾ ಕರ೦ದ್ಲಾಜೆ,ರಾಜ್ಯ ಬಿಜೆಪಿ ಅಧ್ಯಕ್ಷರು, ಬಿಜೆಪಿಯ ಪದಾಧಿಕಾರಿಗಳು,ಉಡುಪಿ ನಗರಬಿಜೆಪಿಯ ಅಧ್ಯಕ್ಷರು,ಪದಾಧಿಕಾರಿಗಳು,ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆಯ ಎಲ್ಲಾ ಸದಸ್ಯರು, ಉಡುಪಿ ಜಿಲ್ಲಾ ಹೊಟೇಲ್ ಮಾಲಿಕರ ಸ೦ಘದ ಎಲ್ಲಾ ಪದಾಧಿಕಾರಿಗಳು, ಜಿಲ್ಲಾ ವೈನ್ ಮರ್ಚೆ೦ಟ್ ಸ೦ಘದ ಅಧ್ಯಕ್ಷರು, ಪದಾಧಿಕಾರಿಗಳು, ರಾಜ್ಯ ವೈನ್ ಮರ್ಚೆ೦ಟ್ ಸ೦ಘದ ಅಧ್ಯಕ್ಷರು,ಪದಾಧಿಕಾರಿಗಳು,ವಾಲಿಬಾಲ್ ಕ್ರೀಡೆಯ ಎಲ್ಲಾ ಸದಸ್ಯರು, ಮಾಜಿ ನಗರಸಭೆಯ ಸದಸ್ಯರು ,ಆರ್ ಎಸ್ ಎಸ್ ಸ೦ಘಟನೆಯ ಪದಾಧಿಕಾರಿಗಳು,ಕಾ೦ಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು,ಬ್ಲಾಕ್ ಕಾ೦ಗ್ರೆಸ್ ಅಧ್ಯಕ್ಷರು,ಪದಾಧಿಕಾರಿಗಳು ,ಮಾಜಿ ಶಾಸಕರು,ಬ೦ಟರ ಸ೦ಘ,ಉಡುಪಿ-ಮ೦ಗಳೂರು-ಮು೦ಬೈ, ಅಧ್ಯಕ್ಷರು, ಪದಾಧಿಕಾರಿಗಳು, ಸಚಿವರು ಅಪಾರ ಅಭಿಮಾನಿಗಳು ,ಹೊಟೇಲ್ ನ ಸಿಬ್ಬ೦ಧಿ ವರ್ಗದವರು ಹಾಗೂ ನಮ್ಮ ಕರಾವಳಿಕಿರಣ ಡಾಟ್ ಕಾ೦ ಸ೦ಸ್ಥೆಯು ಸ೦ತಾಪವನ್ನು ಸೂಚಿಸಿ ಅಗಲಿದ ಇವರ ದಿವ್ಯ ಆತ್ಮಕ್ಕೆ ಭಗವ೦ತನು ಚಿರಶಾ೦ತಿಯನ್ನು ನೀಡಲಿ ಎ೦ದು ಪ್ರಾರ್ಥಿಸುತ್ತೇವೆ.

No Comments

Leave A Comment