ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಉಳ್ಳಾಲ: ಸಿಡಿಲು ಬಡಿದು ಹಾನಿ
ಉಳ್ಳಾಲ:ಜ 04 : ಮನೆಯೊಂದಕ್ಕೆ ಸಿಡಿಲು ಬಡಿದು ವಿದ್ಯುತ್ ಸಲಕರಣೆಗಳು ಸುಟ್ಟುಹೋಗಿ ಅಪಾರ ನಷ್ಟ ಉಂಟಾದ ಘಟನೆ ಉಳ್ಳಾಲ ಬಂಡಿಕೊಟ್ಯದ ನೇಲ್ಯ ಇಲ್ ಎಂಬಲ್ಲಿ ಸಂಭವಿಸಿದೆ.
ಉಳ್ಳಾಲ ಬಂಡಿಕೊಟ್ಯದ ಪ್ರವೀಣ್ ಗುರಿಕಾರ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಲಕರಣೆಗಳಿಗೆ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ವಿದ್ಯುತ್ ವೈರ್, ಸೇರಿದಂತೆ ಹಲವು ಸಲಕರಣೆಗಳು ಸಂಪೂರ್ಣ ಸುಟ್ಟು ನಷ್ಟ ಸಂಭವಿಸಿದೆ. ಬೆಳಗ್ಗೆ ಮನೆಮಂದಿ ಮನೆಯಲ್ಲಿದ್ದ ಸಂದರ್ಭ ಘಟನೆ ನಡೆದಿದೆ. ಕಂದಾಯ ಇಲಾಖೆಗೆ ಈ ಕುರಿತು ದೂರು ನೀಡಲಾಗಿದೆ.