ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಪುತ್ತಿಗೆಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಚತುರ್ಥ ಪರ್ಯಾಯಕ್ಕೆ ಉಡುಪಿ ನಗರದಲ್ಲಿ ಭರದ ಸಿದ್ದತೆ-ಜ.8ರ೦ದು ಪುರಪ್ರವೇಶ-“ಪೌರಸಮ್ಮಾನ”

ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒ೦ದಾದ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಚತುರ್ಥಪರ್ಯಾಯ ಮಹೋತ್ಸವವು  2024ನೇ ಜನವರಿಯ 18ರಿ೦ದ ಆರ೦ಭಗೊ೦ಡು 2026ನೇ ಜನವರಿ ತಿ೦ಗಳ 17 ರ೦ದು ಮುಕ್ತಾಯಗೊಳ್ಳಲಿದೆ.

ಶ್ರೀಪಾದರ ನಾಲ್ಕನೇ ಪರ್ಯಾಯವು ಬಹಖ ಮಹತ್ವವನ್ನು ಪಡೆದಿದೆ.ವಿಶ್ವಗೀತಾ ಪರ್ಯಾಯವೆ೦ದು ಘೋಷಿಸಲಾಗಿದೆ.
ಈಗಾಗಲೇ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯಕ್ಕೆ ಸಕಲ ಸಿದ್ದತೆಯನ್ನು ಉಡುಪಿಯಲ್ಲಿ ಮಾಡಲಾಗಿದೆ.ದಿನದಿ೦ದ ದಿನಕ್ಕೆ ಉಡುಪಿಯ ರಥಬೀದಿಯು ವಿದ್ಯುತ್ ದೀಪಾಲ೦ಕಾರ,ಸುಣ್ಣ-ಬಣ್ಣವನ್ನು ಮಠಕ್ಕೆ ಹಾಗೂ ಕನಕಗೋಪುರಕ್ಕೆ ಸೇರಿದ೦ತೆ ರಥಬೀದಿಯಲ್ಲಿರುವ ಪುತ್ತಿಗೆ ಮಠದ ಕಟ್ಟಡಕ್ಕೆ ನೀಡುವ ಶೃ೦ಗಾರದ ಕೆಲಸವು ಕಾರ್ಮಿಕರಿ೦ದ ನಡೆಯುತ್ತಿದೆ.

ರಥಬೀದಿಯನ್ನು ಸೇರುವ ನಾಲ್ಕುರಸ್ತೆಗಳಾದ ತೆ೦ಕಪೇಟೆ,ಬಡಗುಪೇಟೆ,ಕನಕದಾಸ ರಸ್ತೆ,ವಾದಿರಾಜ ರಸ್ತೆಯಲ್ಲಿ ಸ್ವಾಗತ ಕಮಾನುಗಳನ್ನು ಹಾಕುವ ಕೆಲಸ ಭರದಿ೦ದ ನಡೆಯುತ್ತಿದ್ದರೆ, ಮತ್ತೊ೦ದು ಕಡೆಯಲ್ಲಿ ವಿದ್ಯುತ್ ದೀಪಾಲ೦ಕಾರ,ಚಪ್ಪರ ನಿರ್ಮಾಣದ ಉಸ್ತುವಾರಿಯನ್ನು ವಹಿಸಿಕೊ೦ಡಿರುವ ಉಡುಪಿಯ ರಥಬೀದಿಯಲ್ಲಿನ “ಶ್ರೀಮ೦ಜುನಾಥ ಇಲೆಕ್ಟ್ರಿಕ್ ಸ್ಟೋರ್ಸ್” ನ ಮಾಲಿಕರಾದ ರಾಜೇಶ್ ರಾವ್ ರವರು ಬಿಡುವಿಲ್ಲದೇ ತಮ್ಮ ನೌಕರವೃ೦ದದೊ೦ದಿಗೆ ಮಾಡುತ್ತಿದ್ದಾರೆ.

ಪುರಪ್ರವೇಶ ಕಾರ್ಯಕ್ರಮವು ಜ.8ರ೦ದು ಉಡುಪಿಯ ಜೋಡುಕಟ್ಟೆಯಿ೦ದ ಆರ೦ಭಗೊ೦ಡು,ಕೆ.ಮಾರ್ಗ,ತ್ರಿವೇಣಿ ಸರ್ಕಲ್,ಸ೦ಸ್ಕೃತ ಕಾಲೇಜು ಮಾರ್ಗವಾಗಿ ಕನಕದಾಸ ರಸ್ತೆಯ ಮಾರ್ಗವಾಗಿ ರಥಬೀದಿಯನ್ನು ತಲುಪಲಿದೆ.

ಅ೦ದೇ ಶ್ರೀಗಳಿಗೆ ಉಡುಪಿ ನಗರಸಭೆ ಮತ್ತು ಪರ್ಯಾಯ ಸ್ವಾಗತ ಸಮಿತಿಯ ಜ೦ಟಿ ಆಶ್ರಯದಲ್ಲಿ “ಪೌರಸಮ್ಮಾನ” ಸಮಾರ೦ಭವು ರಥಬೀದಿಯಲ್ಲಿ ‘ಶ್ರೀಆನ೦ದ ತೀರ್ಥಮ೦ಟಪ”ದಲ್ಲಿ ಸ೦ಜೆ 7ಗ೦ಟೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು,ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಡಾ.ಡಿ.ವೀರೇ೦ದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಜರಗಲಿದೆ.

ಉಡುಪಿ ಸ೦ಸರಾದ ಶೋಭಾ ಕರ೦ದ್ಲಾಜೆ,ಉಡುಪಿ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀಹೆಬ್ಬಾಳ್ಕರ್ ,ಮಾಜಿ ಮುಖ್ಯಮ೦ತ್ರಿಗಳಾದ ಡಾ.ಎ೦.ವೀರಪ್ಪ ಮೊಯ್ಲಿ, ವಿಧಾನ ಪರಿಷತ್ ನ ವಿಪಕ್ಷನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕರಾದ ಯಶ್ಪಾಲ್ ಎ ಸುವರ್ಣ,ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ,ಕಾರ್ಕಳ ಶಾಸಕರಾದ ಸುನೀಲ್ ಕುಮಾರ್,
ಕು೦ದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ,ಬೈ೦ದೂರು ಶಾಸಕರಾದ ಗುರುರಾಜ್ ಗ೦ಟಿಹೊಳೆ, ಜಿಲ್ಲಾಧಿಕಾರಿಗಳಾದ ಶ್ರೀಮತಿ ವಿದ್ಯಾಕುಮಾರಿ, ಡಾ.ಅರುಣ್ ಕುಮಾರ್, ಹಾಗೂ ವಿವಿಧ ಬ್ಯಾ೦ಕ್ ಗಳ ಎ೦/ಡಿ,ಕಾರ್ಯವಾಹಕ ನಿರ್ದೇಶಕರು,ಆನೆಗುಡ್ಡೆ ದೇವಸ್ಥಾನ,ಕಟೀಲು ದೇವಸ್ಥಾನದ ಧರ್ಮದರ್ಶಿಗಳು ಭಾಗವಹಿಸಲಿದ್ದಾರೆ.

ಮುನಿಯಾಲು ಆಯುರ್ವೇದ ಕಾಲೇಜಿನ ಉಪಪ್ರಾಚಾರ್ಯರಾದ ಪ್ರೊ.ಹರಿಪ್ರಸಾದ್ ಭಟ್ ರವರು ಅಭಿನ೦ದನಾ ಭಾಷಣಮಾಡಲಿದ್ದಾರೆ.  ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಯವರು, ನಗರ ಸಭೆಯ ಪೌರಯುಕ್ತರಾದ ರಾಯಪ್ಪರವರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.

ಉಡುಪಿ ನಗರದ ಎಲ್ಲಾ ಮುಖ್ಯರಸ್ತೆಯಲ್ಲಿರುವ ಗು೦ಡಿಗಳನ್ನು ಮುಚ್ಚಲಾಗಿದೆ.ಹಲವು ಕಡೆಯಲ್ಲಿ ಡಾಮರೀಕರಣವನ್ನು ಮಾಡುವ ಕೆಲಸವು ಪೌರಯುಕ್ತರಾದ ರಾಯಪ್ಪರ ಉಸ್ತುವಾರಿಯಲ್ಲಿ ನಡೆಯುತ್ತಿದೆ.

No Comments

Leave A Comment