Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಮದ್ಯ ಪ್ರಿಯರಿಗೆ ಶಾಕ್; ಬಡವರ ಫೇವರಿಟ್ OT-BP-IBಬ್ರ್ಯಾಂಡ್​ಗಳ ದರ ಹೆಚ್ಚಳ

ಬೆಂಗಳೂರು: ಜ.02: ಹೊಸ ವರ್ಷದಂದು (New Year) ಬರೋಬ್ಬರಿ 193 ಕೋಟಿ ಆದಾಯ ಗಳಿಸಿ ಮಂದಹಾಸ ಬೀರಿದ್ದ ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಇಂದಿನಿಂದ ಬಡವರು ಕುಡಿಯುವ ಮದ್ಯದ ದರದಲ್ಲಿ ಏರಿಕೆ‌ಯಾಗಿದೆ. ಅಬಕಾರಿ ಇಲಾಖೆ ಬಡವರ ನೆಚ್ಚಿನ‌ ಕೆಲ ಬ್ರ್ಯಾಂಡ್​ಗಳ ದರ ಹೆಚ್ಚಿಸಿದೆ (Liquor Price Increased). ಈ ಮೂಲಕ ಮಧ್ಯಮ ವರ್ಗದ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದೆ. ಹೊಸ ವರ್ಷಕ್ಕೆ ಕಂಠ ಪೂರ್ತಿ ಕುಡಿದು ಕುಪ್ಪಳಿಸಿದ್ದ ಬಡವರು ಈಗ ಎಣ್ಣೆ ಖರೀದಿಸಲು ಯೋಚಿಸುವಂತಾಗಿದೆ.

ಈಗಾಗಲೇ 17% ರಷ್ಟು ಓವರ್ ಆಲ್ ಮಧ್ಯದ ಮೇಲೆ ದರ ಏರಿಕೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಬಡವರು ಹೆಚ್ಚಾಗಿ ಕುಡಿಯುವ ಮೂರು ಹಾಟ್ ಫೇವರೆಟ್ ಬ್ರ್ಯಾಂಡ್​ಗಳ ದರ ಹೆಚ್ಚಳ ಮಾಡಲಾಗಿದೆ. ಮದ್ಯ ಉತ್ವಾದನ‌‌‌ ಕಂಪನಿಗಳು ಕ್ವಾಟರ್​ಗೆ 20 ರಿಂದ ಮೂವತ್ತು ರೂಪಾಯಿ ಏರಿಸಿವೆ. ಇಂದಿನಿಂದ ರಾಜ್ಯಾದ್ಯಂತ ಬಡವರ ಈ ಮೂರು ಫೇವರೆಟ್ ಬ್ರ್ಯಾಂಡ್​ಗಳ ಮೇಲಿನ ದರ ಹೆಚ್ಚಳವಾಗಿದೆ. ಈಗಾಗಲೇ ಬಾರ್ ಮಾಲೀಕರಿಗೆ ಮತ್ತು ಅಬಕಾರಿ ಇಲಾಖೆಗೆ ಮದ್ಯ ತಯಾರಿಕ ಕಂಪನಿಗಳು ಸಂದೇಶ ಕಳುಹಿಸಿವೆ. ರಾಜ್ಯದ ಕೆಳ ವರ್ಗದ ಜನ ಅತಿ ಹೆಚ್ಚು ಸೇವಿಸುವ ಬ್ರ್ಯಾಂಡ್​ಗಳ ದರ ಏರಿಕೆಯಾಗಿದೆ.

ಇದನ್ನೂ ಓದಿ: 2023ನೇ ವರ್ಷದ ಕೊನೆಯ ದಿನದಂದು ದಾಖಲೆಯ ಮದ್ಯ ಮಾರಾಟ: 18.85 ಕೋಟಿ ರೂ.‌ ಮದ್ಯ ಬಿಕರಿ

ಸದ್ಯ ಮದ್ಯ ಏರಿಕೆ ಹಿನ್ನೆಲೆ ಅಬಕಾರಿ ಇಲಾಖೆ ಹಾಗೂ ಕಂಪನಿಗಳ ವಿರುದ್ಧ ಮದ್ಯ ಪ್ರಿಯರು ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಉತ್ಪಾದನ ವೆಚ್ಚ ಅಧಿಕವಾಗಿದೆ ಎಂದು ಮದ್ಯ ಉತ್ವನ್ನ ಕಂಪನಿಗಳು ಸಮಜಾಯಿಸಿ ನೀಡಿವೆ. ಇನ್ನು ಮತ್ತೊಂದೆಡೆ ಹೀಗೆ ರೇಟ್ ಹೆಚ್ಚಳವಾದ್ರೆ ಮದ್ಯ ಮಾರಾಟದಲ್ಲಿ ಕುಸಿತ ಆಗುತ್ತೆ ಎಂದು ಬಾರ್ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ‌ ಬ್ರ್ಯಾಂಡ್​ಗಳಿಗಿಂತ ಕಡಿಮೆ ರೇಟಿನ ಎಣ್ಣೆಗೆ ಜನ ಶಿಫ್ಟ್ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ದುಬಾರಿಯಾಯ್ತು ಬಡವರ ಫೇವರೆಟ್ ಬ್ರ್ಯಾಂಡ್
ಓಟಿ(180 ಎಂಎಲ್): ಈ ಹಿಂದೆ 90 ರೂಪಾಯಿ, ಜನವರಿ 2 ರಿಂದ 111 ರೂಪಾಯಿ.
ಬಿಪಿ(180 ಎಂಎಲ್): ಹಿಂದೆ 110 ರೂಪಾಯಿ, ಇಂದಿನಿಂದ- 145 ರೂಪಾಯಿ.
8PM(180 ಎಂಎಲ್): ನಿನ್ನೆಯ ದರ 90 ರೂಪಾಯಿ, ಇಂದಿನ ದರ 111 ರೂಪಾಯಿ.ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ

No Comments

Leave A Comment