ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಭಾಷಾ ನ್ಯೂನತೆ ನಿವಾರಿಸಲು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಹಾಯ, ಎಐ ತಂತ್ರಜ್ಞಾನದಿಂದ ಸಂಶೋಧನೆ: ‘ಮನ್ ಕಿ ಬಾತ್’ ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಭಾಷಾ ನ್ಯೂನತೆಯಿಂದ ಶಾಲೆಯಿಂದ ಹೊರಗುಳಿದ ಅಥವಾ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿದ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ(NEP) ಕಲಿಕೆಯಲ್ಲಿನ ಅಂತಹ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಮ್ಮ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ನ ವರ್ಷದ ಕೊನೆಯ 108ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಉದ್ದೇಶವೆಂದರೆ ಭಾಷೆ ಮಕ್ಕಳಿಗೆ ವಿದ್ಯಾಭ್ಯಾಸ ಗಳಿಕೆಗೆ ತೊಡಕಾಗಬಾರದು ಮತ್ತು ಪ್ರತಿಯೊಂದು ಮಗುವಿನ ಸಮಗ್ರ ಅಭಿವೃದ್ಧಿಯಾಗಬೇಕು ಎಂಬುದು. ರಾಷ್ಟ್ರೀಯ ಶಿಕ್ಷಣ ನೀತಿ ಇದಕ್ಕೆ ವರದಾನವಾಗಿದೆ ಎಂದರು.

ನಮ್ಮ ದೇಶದಲ್ಲಿ ಭಾಷಾ ನ್ಯೂನತೆಯಿಂದ ಹಲವು ಮಕ್ಕಳು ಓದನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ನಮ್ಮ ಹೊಸ ಶಿಕ್ಷಣ ನೀತಿ ಅಂತಹ ಅಡೆತಡೆಗಳನ್ನು ಹೋಗಲಾಡಿಸಲು ಸಹಾಯ ಮಾಡುವುದಲ್ಲದೆ ಮಗುವಿನ ಸಮಗ್ರ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದರು.

ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(NEP) ಜುಲೈ 29, 2020ರಲ್ಲಿ ಜಾರಿಗೆ ತಂದಿತು. ಶಾಲಾ ಶಿಕ್ಷಣದಲ್ಲಿ ಸಮಗ್ರ ಸುಧಾರಣೆ ತರುವುದು ಇದರ ಉದ್ದೇಶವಾಗಿದೆ. ಪೂರ್ವ ಪ್ರಾಥಮಿಕ ಹಂತದಿಂದ 12ನೇ ತರಗತಿಯವರೆಗೆ ಸಮಗ್ರ ಶಿಕ್ಷಣ ಎಲ್ಲಾ ಹಂತಗಳಲ್ಲಿ ಲಭ್ಯವಾಗುವಂತೆ ಖಚಿತಪಡಿಸುತ್ತದೆ. ಎನ್ ಇಪಿ ಅಡಿಯಲ್ಲಿ ಆರಂಭಿಕ ಬಾಲ್ಯಜೀವನದ ಆರೈಕೆ ಮತ್ತು 3ರಿಂದ 7 ವರ್ಷದವರೆಗೆ ಎಲ್ಲಾ ಮಕ್ಕಳಿಗೆ ಶಿಕ್ಷಣ ಒದಗಿಸುತ್ತದೆ ಎಂದರು.

ಇಂದಿನ ಮನ್​ಕಿ ಬಾತ್​ನ ಪ್ರಮುಖಾಂಶಗಳು: ಈ ವರ್ಷ ನಾವು ಅನೇಕ ಸಾಧನೆಗಳನ್ನು ಮಾಡಿದ್ದೇವೆ. ದೇಶವು ಐದನೇ ಅತಿದೊಡ್ಡ ಆರ್ಥಿಕತೆಯಾಯಿತು. ಜಿ20ನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಇಂದು ದೇಶದ ಮೂಲೆ ಮೂಲೆಗಳಲ್ಲಿ ಆತ್ಮವಿಶ್ವಾಸ ತುಂಬಿದೆ. ಮುಂದಿನ ವರ್ಷವೂ ಈ ಉತ್ಸಾಹವನ್ನು ಉಳಿಸಿಕೊಳ್ಳಬೇಕು. ಚಂದ್ರಯಾನ-3ರ ಯಶಸ್ಸಿಗಾಗಿ ಹಲವರು ನನಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಮಹಿಳಾ ವಿಜ್ಞಾನಿಗಳನ್ನು ವಿಶೇಷವಾಗಿ ಪ್ರಶಂಸಿಸಲಾಗುತ್ತಿದೆ.

ನಾಟು-ನಾಟು ಆಸ್ಕರ್ ಪ್ರಶಸ್ತಿ ಪಡೆದಾಗ ಇಡೀ ದೇಶವೇ ಸಂತಸಗೊಂಡಿತ್ತು. ನಮ್ಮ ಕ್ರೀಡಾಪಟುಗಳು ಈ ವರ್ಷವೂ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಹಲವು ಕ್ರೀಡೆಗಳಲ್ಲಿ ಆಟಗಾರರ ಸಾಧನೆ ದೇಶದ ಘನತೆಯನ್ನು ಹೆಚ್ಚಿಸಿದೆ.

ಭಾರತ ಅಭಿವೃದ್ಧಿ ಹೊಂದಿದಾಗ ಯುವಜನತೆ ಅದರ ಲಾಭ ಪಡೆಯುತ್ತಾರೆ ಎಂದು ಪ್ರಧಾನಿ ಹೇಳಿದರು. ಆದರೆ ಯುವಕರು ಫಿಟ್​ ಆಗಿರುವುದು ಕೂಡ ಅಷ್ಟೇ ಮುಖ್ಯ.

ಕಾಶಿ-ತಮಿಳು ಸಂಗಮದಲ್ಲಿ ಪಾಲ್ಗೊಳ್ಳಲು ತಮಿಳುನಾಡಿನಿಂದ ಸಾವಿರಾರು ಜನರು ಕಾಶಿ ತಲುಪಿದ್ದರು. ಅಲ್ಲಿ ನಾನು ಅವರೊಂದಿಗೆ ಸಂವಹನ ನಡೆಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಲ್ ಟೂಲ್ ಭಾಷಿಣಿಯನ್ನು ಮೊದಲ ಬಾರಿಗೆ ಬಳಕೆ ಮಾಡಿದ್ದೆ, ನಾನು ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರೆ ಅದು ತಮಿಳಿಗೆ ಭಾಷಾಂತರವಾಗುತ್ತಿತ್ತು.

ನಿಯಮಿತ ವ್ಯಾಯಾಮ ಮತ್ತು 7 ಗಂಟೆಗಳ ಸಂಪೂರ್ಣ ನಿದ್ರೆ ದೇಹಕ್ಕೆ ಬಹಳ ಮುಖ್ಯ ಮತ್ತು ಫಿಟ್ ಆಗಿರಲು ಸಹಾಯ ಮಾಡುತ್ತದೆ. ಭಾರತವು ಇನ್ನೋವೇಷನ್ ಹಬ್ ಆಗುತ್ತಿರುವುದು ಎಂದೂ ನಾವು ನಿಲ್ಲುವುದಿಲ್ಲ ಎಂಬುದರ ಸಂಕೇತವಾಗಿದೆ.

2015 ರಲ್ಲಿ ನಾವು ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌ನಲ್ಲಿ 81 ನೇ ಸ್ಥಾನವನ್ನು ಪಡೆದಿದ್ದೇವೆ, ಇಂದು ನಾವು 40 ನೇ ಸ್ಥಾನದಲ್ಲಿದ್ದೇವೆ ಎಂದರು.

No Comments

Leave A Comment