ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಮಣಿಪಾಲದ ಶ್ರೀ ಮಹಾಮಾಯಾ ಭಜನೆ ಮಂಡಳಿಯ 17ನೇಯ ವಾರ್ಷಿಕೋತ್ಸವ-ಭಜನಾ ತರಬೇತಿಗೆ ಚಾಲನೆ
ಉಡುಪಿ:ಮಣಿಪಾಲದ ಶ್ರೀಮತಿ ಮಾಯಾ ಕಾಮತ್ ಈಶ್ವರನಗರ ಮಣಿಪಾಲ ಇವರ ನೇತೃತ್ವದಲ್ಲಿನ ಶ್ರೀ ಮಹಾಮಾಯಾ ಭಜನೆ ಮಂಡಳಿಯ 17ನೇಯ ವಾರ್ಷಿಕೋತ್ಸವದ ಪ್ರಯುಕ್ತ ಪ್ರಗತಿ ನಗರದ ಅಂಗನವಾಡಿಯಲ್ಲಿ ಭಜನಾ ತರಬೇತಿ ಮತ್ತು ಭಜನೆ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಶ್ರುತಿ. ಜಿ ಶೆಣೈ ಯವರು ದೀಪಬೆಳಗಿಸಿ ಶುಭವನ್ನು ಕೋರಿದರು.
ಮುಖ್ಯ ಅತಿಥಿಯಾಗಿ ಪ್ರಗತಿ ನಗರದ ಅಂಗನವಾಡಿ ಶಾಲೆಯ ಶಿಕ್ಷಕಿ ಹೇಮಲತಾ ಮಾಧವ, ಭದ್ರಕಾಳಿ ಮಂದಿರದ ಉಪಾಧ್ಯಕ್ಷರು ಆದ ಶ್ರೀಯುತ ಮಿಥುನ್ ಪೂಜಾರಿ, ಶ್ರೀಮತಿ ಸುಜಾತಾ ಪೂಜಾರಿ ಪ್ರಗತಿನಗರ,ಶ್ರೀಮತಿ ಸುಗಣಶೆಟ್ಟಿ ಅಂಬಾಗಿಲು ಶ್ರೀಮತಿ ಅಹಲ್ಯ ರಾವ್ ಅಂಬಾಗಿಲು,ಶ್ರೀಮತಿ ವಿದ್ಯಾ. S ನಾಯಕ್ ಲಕ್ಷೀoದ್ರ ನಗರ, ಶ್ರೀಮತಿ ಸುಜಾತಾ ಗಣೇಶ್ ಉಡುಪಿ, ನಾಗರಾಜ್ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಶ್ರೀಮತಿ ಪ್ರಭಾ ರಾವ್, ಶ್ರೀಮತಿ ಕುಸುಮಾ ಕಾಮತ್ ಕರ್ವಾಲ್, ಶ್ರೀಮತಿ ಸುಮಿತ್ರ ಪೂಜಾರಿ ಪ್ರಗತಿ ನಗರ ಇವರನ್ನು ಸನ್ಮಾನನಿಸಲಾಯಿತು.
ಶ್ರೀಮತಿ ಸವಿತಾಶೆಟ್ಟಿ ಈಶ್ವರ ನಗರ ಮಣಿಪಾಲ ಇವರು ನಿರೂಪಣೆ ಮಾಡಿದರು. ಪ್ರಭಾವತಿ ಪ್ರಾರ್ಥನೆ ಮಾಡಿದರು. ಶ್ರೀಮತಿ ವಿದ್ಯಾ ಶರ್ಮಾ ಕಟಪಾಡಿ,ಸಂಜನಾ ಮೋಹನ್, ಹರಿಣಿ ನಾಯಕ್, ಗೀತಾ ಸಂಜೀವ, ಜ್ಯೋತಿ ನಾಯಕ್, ಯಶೋದಾ ಕುಂದರ್,ನಿತ್ಯಲಕ್ಷ್ಮಿ ಭಟ್,ಯುಕ್ತಾವತಿ ರಾಮಚಂದ್ರ, ಸಹಕರಿಸಿದರು . ಶ್ರೀಮತಿ ಸವಿತಾ ಶೆಟ್ಟಿ ಎಲ್ಲಾ ಅಂಗನವಾಡಿ ಮಕ್ಕಳಿಗೆ ಉಡುಗೊರೆ ನೀಡಿದರು.ಭಜನೆ ತಂಡದವರಿಂದ ಭಜನೆ ಕಾರ್ಯ ಕ್ರಮ ನಡೆಯಿತು , ಮಕ್ಕಳಿಗೆ ಸಿಹಿ ತಿಂಡಿಯೊ೦ದಿಗೆ ಉಪಹಾರ ನೀಡಲಾಯಿತು , ಶ್ರೀಮತಿ ಸವಿತಾ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು