ಐಪಿಎಲ್ ನ ಮಾಜಿ ಆಟಗಾರನ ವಿರುದ್ಧ ಅತ್ಯಾಚಾರದ ಆರೋಪ ಸಾಬೀತು!
ಕಠ್ಮಂಡು: ಐಪಿಎಲ್ ನ ಮಾಜಿ ಆಟಗಾರ, ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಾಮಿಚಾನೆ ವಿರುದ್ಧ ಅತ್ಯಾಚಾರ ಆರೋಪ ಸಾಬೀತಾಗಿದ್ದು ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ
ಸಂದೀಪ್ ಲಾಮಿಚಾನೆ ವಿರುದ್ಧ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದೆ. ಸಂದೀಪ್ ಲಾಮಿಚಾನೆ ಜಗತ್ತಿನಾದ್ಯಂತ ಮುಖ್ಯ ಟಿ20 ಲೀಗ್ ನಲ್ಲಿ ಭಾಗಿಯಾಗಿರುವ ಏಕೈಕ ನೇಪಾಳ ಕ್ರಿಕೆಟಿಗರಾಗಿದ್ದಾರೆ.
2022 ರಲ್ಲಿ ಈತನ ವಿರುದ್ಧ ಹಲ್ಲೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಈತನ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದ್ದರು. ಪರಿಣಾಮ ಸಂದೀಪ್ ಲಮಿಚಾನೆಯನ್ನು ನೇಪಾಳ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಅಮಾನತುಗೊಳಿಸಲಾಗಿತ್ತು.
“ನಾವು ಈ ತೀರ್ಪನ್ನು ನಿರೀಕ್ಷಿಸಿರಲಿಲ್ಲ… ನಾವು ಹತಾಶರಾಗಿದ್ದೇವೆ” ಎಂದು ವಕೀಲ ಸಬಿತಾ ಭಂಡಾರಿ ಬರಾಲ್ ರಾಯಿಟರ್ಸ್ಗೆ ಕಠ್ಮಂಡು ಜಿಲ್ಲಾ ನ್ಯಾಯಾಲಯದ ಶುಕ್ರವಾರದ ತೀರ್ಪಿನ ಬಗ್ಗೆ ತಿಳಿಸಿದರು. “ನಾವು ಖಂಡಿತವಾಗಿಯೂ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ವಕೀಲರು ತಿಳಿಸಿದ್ದಾರೆ.