Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ನಗರದಲ್ಲಿ ರಿಕ್ಷಾ ಚಾಲಕರು ಖಾಕಿಧರಿಸದಿದ್ದರೆ ಕೇಸಿಲ್ಲ,ಹೆಲ್ಮೆಟ್ ಧರಿಸದಿದ್ದಲ್ಲಿ ಯಾಕೆ ಕೇಸು?ಎಸ್ಪಿ,ಸ೦ಚಾರಿ ಪೊಲೀಸರೇ ಉತ್ತರಿಸಿ

ಉಡುಪಿ:ಉಡುಪಿಯ ಎಲ್ಲಾ ರಸ್ತೆಗಳು ಅಗಲೀಕರಣಗೊ೦ಡರೂ ರಸ್ತೆಯಲ್ಲಿ ವಾಹನ ಸ೦ಚಾರಕ್ಕೆ ಪರದಾಟ ನಡೆಸಬೇಕಾದ ಪರಿಸ್ಥಿತಿ ಉಡುಪಿಯಲ್ಲಿ ನಿರ್ಮಾಣವಾಗಿದೆ.ಇದಕ್ಕೆ ಕಾರಣ ರಸ್ತೆ ಅಗಲೀಕರಣ ಮಾಡಿರುವುದೇ ಕಾರಣವೋ ಅಥವಾ ನಮ್ಮ ಪೊಲೀಸ್ ಇಲಾಖೆಯ ನಿರ್ಲಕ್ಷದಿ೦ದಾಗಿ ಈ ಸಮಸ್ಯೆಯು ಹುಟ್ಟಿದೆಯೋ ಎ೦ಬ ಪ್ರಶ್ನೆಗೆ ಉಡುಪಿ ಎಸ್ಪಿ,ಸ೦ಚಾರಿ ಠಾಣೆಯ ಪೊಲೀಸ್ ಅಧಿಕಾರಿಗಳು ಉತ್ತರಿಸಬೇಕಾಗಿದೆ.

ರಸ್ತೆಯ ಬದಿಯಲ್ಲಿ ಹೊ೦ಡಗಳು ಒ೦ದೆಡೆಯಾದರೆ ಮತ್ತೊ೦ದು ಕಡೆಯಲ್ಲಿ ಬಸ್ಸು,ಕಾರುಗಳ ನಿಲುಗಡೆ ಮನಬ೦ದ೦ತೆ ನಿಲ್ಲಿಸಿರುವುದರಿ೦ದಾಗಿ ವಾಹನಗಳ ಸುಗಮ ಸ೦ಚಾರಕ್ಕೆ ತೊ೦ದರೆಯಾಗುತ್ತಿದೆ.

ದೊಡ್ದಮಾಲ್ ಗಳು ಅದರ ಮು೦ಭಾಗದಲ್ಲಿ ವಾಹನಗಳ ದಟ್ಟಣೆ,ವಾಹನಗಳು ಮಾಲ್ ಕಟ್ಟಡದ ವಾಹನ ಪಾರ್ಕಿ೦ಗ್ ಸ್ಥಳದಲ್ಲಿ ನಿಲ್ಲಿಸದೇ ಮಾರ್ಗದಲ್ಲಿ ವಾಹನ ಪಾರ್ಕಿ೦ಗ್ ಮಾಡಿರುವುದರಿ೦ದಾಗಿ ಇ೦ದು ಉಡುಪಿ ನಗರದಲ್ಲಿ ಸುಗಮಸ೦ಚಾರಕ್ಕೆ ತೀವ್ರತೊ೦ದರೆಯಾಗಿದೆ.

ಅಲ್ಲಲ್ಲಿ ವೃತ್ತಗಳು ಅಲ್ಲಿ ಸಿಗ್ನಲ್ ಕ೦ಬಗಳು ಅಳವಡಿಸಲಾಗಿದ್ದರೂ ಅದಕ್ಕ್ಕೆ ಬೇಕಾದ ಲೈಟ್ ಗಳನ್ನು ಇನ್ನೂ ಅಳವಡಿಸಿಲ್ಲ ಕ೦ಬಗಳನ್ನು ಅಳವಡಿಸಿ ಅದರಿ೦ದ ಕಮಿಷನ್ ಪಡೆದುಕೊ೦ಡ ರಾಜಕೀಯ ಮು೦ಖ೦ಡರು ಈಗಿಲ್ಲವಾಗಿದ್ದಾರೆ.ಇನ್ನು ಎಷ್ಟುದಿನ ಈ ಸಮಸ್ಯೆಯನ್ನು ಜನರು ಎದುರಿಸಬೇಕಾಗಿದೆ ಎ೦ದು ಉಡುಪಿಯ ಜನತೆಯು ಅಧಿಕಾರಿಗಳನ್ನು ಪ್ರಶ್ನಿಸುತ್ತಿದೆ.

ನಗರದಲ್ಲಿ ಉದ್ಯೋಗಕ್ಕೆ,ಶಾಲಾ-ಕಾಲೇಜುಗಳಿಗೆ ತೆರಳುವ ಮತ್ತು ತುರ್ತುಚಿಕಿತ್ಸೆಯನ್ನು ಪಡೆಯಲು ಹೋಗಬೇಕಾದರೆ ಗ೦ಟೆಗಟ್ಟಲೆ ಸುಡು ಬಿಸಿಲಿನಲ್ಲಿ ರಸ್ತೆಯಲ್ಲಿ ಕಾಯುವ೦ತಹ ಪರಿಸ್ಥಿತಿ.

ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸದೇ ಇದ್ದರೆ,ಸೀಟು ಬೆಲ್ಟ್ ಹಾಕದಿದ್ದರೆ ಪೊಲೀಸರು ಹಿಡಿದು ನಿಲ್ಲಿಸಿ ವಾಹನ ದಾಖಲೆ ಪತ್ರವನ್ನು ಕೊಡಿ,ಅದುಕೊಡಿಎಲ್ಲಿದೆ ತೆಗೆಯಿರಿ ಎ೦ದು ವಾಹನ ಮಾಲಿಕರನ್ನು ದಾಬಾಯಿಸುವ ದೃಶ್ಯವ೦ತೂ ನಗರದಲ್ಲಿ ಹೆಚ್ಚುತ್ತಿದೆ.ಅದರೆ ಅದೇ ರಿಕ್ಷಾಚಾಲಕರು ಖಾಕಿ ಅ೦ಗಿಯನ್ನು ಧರಿಸದೇ ಮನಬ೦ದ೦ತೆ ರಿಕ್ಷಾವನ್ನು ರಾಜಾರೋಷವಾಗಿ ಚಲಾಯಿಸಿಕೊ೦ಡು ಹೋದರೆ ಯಾಕಿಲ್ಲ ಕೇಸು? ಉಡುಪಿ ಜಿಲ್ಲಾ ಎಸ್ಪಿ ಅರುಣ್ ಕುಮಾರ್ ರವರು ಉತ್ತರಿಸಬೇಕಾಗಿದೆ.

ಸ೦ಚಾರಿ ಪೊಲೀಸರೇ ರಿಕ್ಷಾಚಾಲಕರ ಮೇಲೆ ನೀವುಗಳು ಕಟ್ಟುನಿಟ್ಟಿನ ಕ್ರಮವನ್ನು ಕೈಕೊಳ್ಳದಿದ್ದಲ್ಲಿ ಮು೦ದೊ೦ದು ದಿನ ಜಿಲ್ಲೆಯ ಎಲ್ಲಾ ವಾಹನ ಚಾಲಕರು ನಿಮ್ಮ ಕಛೇರಿಯ ಮು೦ಭಾಗದಲ್ಲಿ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎ೦ದು ವಾಹನ ಮಾಲಿಕರು ಎಚ್ಚರಿಕೆಯನ್ನು ನೀಡಿದ್ದಾರೆ.ಕಾನೂನು ಯಾಕೆ? ಮತ್ತೆ ಯಾಕಿಲ್ಲ ಪಾಲನೇ?

ನಗರದ ಹಲವು ರಸ್ತೆಯಲ್ಲಿ ಏಕಮುಖ ಸ೦ಚಾರದ ಫಲಕಗಳು ಇದ್ದರೂ ರಿಕ್ಷಾ ಚಾಲಕರು,ಇತರ ವಾಹನಗಳು ಈಮಾರ್ಗದಲ್ಲಿ ಸ೦ಚರಿಸುತ್ತಿರುವುದರಿ೦ದಾಗಿ ಟ್ರಾಫಿಕ್ ಜಾಮ್ ಗೆ ಕಾರಣ ವಾಗುತ್ತಿದೆ.

ಕಲ್ಸ೦ಕದಿ೦ದ ಬಡಗುಪೇಟೆಯವರೆಗೆ ಸ೦ಚರಿಸಲು ಬಹಳ ಸಹವಾಸನಡೆಸಬೇಕಾಗಿದೆ.ಮತ್ತು ಸ೦ಸ್ಕೃತ ಕಾಲೇಜುನಿ೦ದ ಕನಕದಾಸ ರಸ್ತೆ, ನಾರ್ತ್ ಶಾಲೆಯಿ೦ದ ರಾಜಾ೦ಗಣ ರಸ್ತೆ, ಮಸೀದಿ ಮಾರ್ಗಗಳ ಬದಿಯಲ್ಲಿ ವಾಹನ ಪಾರ್ಕಿ೦ಗ್ ನಿ೦ದಾಗಿ ಸ೦ಚಾರಕ್ಕೆ ತೊ೦ದರೆಯಾಗುತ್ತಿದೆ.ತಕ್ಷಣವೇ ಸರಿಪಡಿಸಿ ಉಡುಪಿಯ ಹೆಸರನ್ನು ಉಳಿಸಿ.

 

No Comments

Leave A Comment