Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ರಾಜ್ಯದಲ್ಲಿ ಶಾಂತಿ ಕದಡಿ ಕೋಮು ಗಲಭೆ ಸೃಷ್ಟಿಸಲು ಕಲ್ಲಡ್ಕ ಭಟ್ ಯತ್ನ-ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ಕಲ್ಲಡ್ಕ ಪ್ರಭಾಕರ್ ಭಟ್ ರವರು ಮುಸ್ಲಿಂ ಮಹಿಳೆಯರ ಬಗ್ಗೆ ನೀಡಿದ ಹೇಳಿಕೆ ಇಡೀ ಪ್ರಪಂಚದಾದ್ಯಂತ ಭಾರತೀಯರು ತಲೆತಗ್ಗಿಸುವಂತಹ ಹೇಳಿಕೆಯಾಗಿದೆ ಪ್ರಪಂಚದಾದ್ಯಂತ ಜಾತ್ಯತೀತಗೆ ಹೆಸರುವಾಸಿಯಾದ ನಮ್ಮ ಭಾರತ ಮಾತೆಗೆ ಅವಮಾನಿಸಿದಂತ ಹೇಳಿಕೆ ಪ್ರಭಾಕರ್ ಭಟ್ ರವರು ನೀಡಿರುತ್ತಾರೆ.

ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷದ ಸರಕಾರ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಮಾನ್ಯ ಉಪಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್. ಇವರ ನೇತೃತ್ವದಲ್ಲಿ ಹಾಗೂ ನಾಯಕತ್ವದಲ್ಲಿ ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಿದ್ದು ರಾಜ್ಯದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಯನ್ನು ಪಡೆದುಕೊಂಡು ಸಂತೋಷವಾಗಿದ್ದಾರೆ ಬಿಜೆಪಿ ಪಕ್ಷದ ಗೋಚರವೇ ರಾಜ್ಯದ ಜನತೆಗೆ ಇಲ್ಲದಂತಾಗಿದೆ .

ಇದನ್ನು ಅರಿತ ಬಿಜೆಪಿ ಹಾಗೂ ಸಂಘ ಪರಿವಾರದವರು ದೇಶದಾದ್ಯಂತ ಶಾಂತಿಯನ್ನು ಕ ದಡಿಸಿ ಕೋಮುಗಲಭೆಯನ್ನು ಸೃಷ್ಟಿಸಿ ಅಧಿಕಾರವನ್ನು ಪಡೆಯುವ ಹುನ್ನಾರವನ್ನು ನಡೆಸುತ್ತಿದ್ದು ಪ್ರಾಯೋಜಿಕವಾಗಿ ಕಲ್ಲಡ್ಕ ಭಟ್ ರವರಿಂದ ಹೇಳಿಕೆಯನ್ನು ನೀಡಿಸಿ ರಾಜ್ಯದಲ್ಲಿ ಶಾಂತಿ ಕದಡಿಸುವ ಯತ್ನವನ್ನು ಮಾಡಿರುತ್ತಾರೆ ನಮ್ಮ ರಾಜ್ಯ ಸರಕಾರ ಇಂತಹ ಕೋಮು ಗಲಭೆ ಸೃಷ್ಟಿಸುವ ಹುನ್ನಾರವನ್ನು ನಡೆಸಲು ಯತ್ನಿಸುವ ಈ ಪ್ರಭಾಕರ್ ಭಟ್ ಹಾಗೂ ಅವರು ಯಾವ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೋ ಆ ಕಾರ್ಯಕ್ರಮದ ಪ್ರಾಯೋಜಕರನ್ನು ಕೂಡ ಕೂಡಲೇ ಬಂಧಿಸಬೇಕು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸೌಹಾರ್ದತೆಯ ನೆಲೆಯಲ್ಲಿ ರಾಜ್ಯದ ಜನರು ನೆಲೆಸುವಂತಾಗಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment