ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬೀದರ್: ಆಟವಾಡುತ್ತಿದ್ದಾಗ ಇನ್ನೋವಾ ಕಾರೊಂದು ಹರಿದು, ಒಂದೂವರೆ ವರ್ಷದ ಮಗು ಮೃತ್ಯು
ಬೀದರ್: ನಗರದ ಹಾರೂರಗೇರಿಯ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಎದುರುಗಡೆ ಒಂದೂವರೆ ವರ್ಷದ ಮಗು ಆಟವಾಡುತ್ತಿದ್ದಾಗ ಇನ್ನೋವಾ ಕಾರೊಂದು ಹರಿದು, ಒಂದೂವರೆ ವರ್ಷದ ಬಸವಚೇತನ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ.
ಹಾರೂರಗೇರಿ ನಿವಾಸಿಗಳಾದ ಸಂಗೀತಾ ಸತೀಷ ಪಾಟೀಲ ದಂಪತಿಗಳ ಪುತ್ರ. ಕೆಲ ತಿಂಗಳುಗಳ ಹಿಂದೆ ಮಗುವಿನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು.
ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತ ಕಾರು ಓಡಿಸುತ್ತಿರುವುದರಿಂದ ಮಗುವಿನ ಮೇಲೆ ಕಾರು ಹರಿದ ವಿಷಯ ಆತನಿಗೆ ಗೊತ್ತಾಗಲಿಲ್ಲ. ಪಕ್ಕದಲ್ಲೇ ಇನ್ನೊಂದು ಕಾರು ನಿಂತಿದೆ. ಆ ಕಾರು ಚಾಲಕ ಅದನ್ನು ನೋಡಿದ್ದಾನೆ. ತಕ್ಷಣವೇ ಮಗುವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರೂ ಅಲ್ಲಿಯವರೆಗೆ ಮಗುವಿನ ಜೀವ ಹೋಗಿತ್ತು.
ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಾರನ್ನು ದಸ್ತಗಿರಿ ಮಾಡಿಕೊಂಡಿದ್ದಾರೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.