ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕುಶಾಲನಗರ : 10800 ಭಕ್ತರಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
ಕುಶಾಲನಗರ : ಶ್ರೀ ಶ್ರೀ ಡಾ.ಸುಗುಣೆ0ದ್ರ ತೀರ್ಥ ಸ್ವಾಮೀಜಿ ಅವರ ಮಹೋನ್ನತ ಧಾರ್ಮಿಕ ಜಾಗತಿಕ ಸಂಕಲ್ಪ ಕೋಟಿ ಗೀತಾ ಲೇಖನ ಯಜ್ಞಕ್ಕೆ 10800 ಯಜ್ಞಕರ್ತರನ್ನು ನೋಂದಣಿ ಮಾಡಿಸಲು ಸ್ವತಃ ಶ್ರೀಪಾದರು ಪ್ರತಿಜ್ಞೆ ವಿಧಿ ಬೋಧಿಸಿದರು.
ಕಿರಿಯ ಪಟ್ಟದ ಶ್ರೀ ಶ್ರೀ ಸುಶ್ರೀ0ದ್ರ ತೀರ್ಥ ಶ್ರೀಪಾದರೂ ಉಪಸ್ಥಿತರಿದ್ದ ಈ ಬೃಹತ್ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ಕುಶಾಲನಗರದ ಸಂಕರ್ಷಣ ಪ್ರಖಂಡ ಕೋಟಿ ಗೀತಾ ಲೇಖನ ಯಜ್ಞ ಪರಿವಾರ ಆಯೋಜಿಸಿತ್ತು .
ಡಿಸೆಂಬರ್ 27 ರಂದು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಖಲೆಯ1008 ಯಜ್ಞಕರ್ತರು ಭಾಗವಹಿಸಿದ್ದರು.