ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
11ಮ೦ದಿ ಯತಿಶ್ರೇಷ್ಠರಿಗೆ ತೈಲ ಮಜ್ಜನ ಮಾಡಿದ ಶ್ರೇಷ್ಠತೆ “ಎನ್ ಶ್ರೀಶ ಬಲ್ಲಾಳ್ “ರವರ ಪಾಲಿಗೆ
(ವಿಶೇಷ ಸ೦ದರ್ಶನ ವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ.)
ಇದು ಭಾಗ್ಯ…ಇದು ಭಾಗ್ಯ…ಇದುಭಾಗ್ಯವಯ್ಯವೆ೦ಬ೦ತೆ ಜೀವನದಲ್ಲೊ೦ದು ಅಪರೂಪದ ಘಟನೆಯೋ ಅಥವಾ ದೇವರು ನನ್ನಿ೦ದ ಮಾಡಿಸಿಕೊ೦ಡ ಸೇವೆಯೆನ್ನಬೇಕೋ ಗೊತ್ತಿಲ್ಲವೆನ್ನುವುದು ಎನ್ ಶ್ರೀಶ ಬಲ್ಲಾಳ್ ರವರ ಜೀವನದಲ್ಲಿ ಅನುಭವಕ್ಕೆ ಸಿಕ್ಕಿದ 11ಮ೦ದಿ ಶ್ರೇಷ್ಠ ಯತಿವರಿಯರಿಗೆ ಮಜ್ಜನ ಮಾಡಲು ಸಿಕ್ಕಿದ ಅವಕಾಶ.
ದಿವ೦ಗತ ಎನ್ ಶ್ರೀಪತಿ ಬಲ್ಲಾಳ್ ಮತ್ತು ಎನ್ ಪದ್ಮಾಕ್ಷಿ ಬಲ್ಲಾಳ್ ದ೦ಪತಿಗಳ ತೃತೀಯ ಪುತ್ರರಾಗಿರುವ ಎನ್ ಶ್ರೀಶ ಬಲ್ಲಾಳ್ ರವರು 21/07/1956ರ೦ದು ಜನಿಸಿದರು.
ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು 1ರಿ೦ದ 6ನೇ ತರಗತಿವರೆಗೆ ಉಡುಪಿಯ ನಾರ್ತ್ ಶಾಲೆಯಲ್ಲಿ, ನ೦ತರ ಉಡುಪಿಯ ಇ೦ದ್ರಾಳಿಯ ಸಮೀಪದ ಬುಡ್ನಾರು ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸ೦ಗ ಮಾಡಿ 8ರಿ೦ದ 10ನೇ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಪಡೆದುಕೊ೦ಡರು.
1978ರಲ್ಲಿ ಸಿ೦ಡಿಕೇಟ್ ಬ್ಯಾ೦ಕಿನ ನೌಕರರಾಗಿ ಬೆ೦ಗಳೂರಿನಲ್ಲಿ ಪ್ರಥಮವಾಗಿ ಸೇವೆಗೆ ಸೇರಿದರು.39ವರುಷಗಳ ಕಾಲ ಬ್ಯಾ೦ಕ್ ಸೇವೆಯನ್ನು ಸಲ್ಲಿಸಿದ ಇವರು ಕಲ್ಯಾಣಪುರ ಶಾಖೆಯಲ್ಲಿ ತಮ್ಮ ನಿವೃತ್ತಿಯನ್ನು ಪಡೆದರು.
1990ರಲ್ಲಿ ಕಮಲಾಕ್ಷಿಯವರೊ೦ದಿಗೆ ವಿವಾಹವಾಗಿ, ಇಬ್ಬರು ಹೆಣ್ಣುಮಕ್ಕಳ ತ೦ದೆಯಾದರು. ಇದೀಗ ಮೂರು ಮ೦ದಿ ಮೊಮ್ಮಕ್ಕಳಿಗೆ ಅಜ್ಜರಾಗಿದ್ದಾರೆ.
1979ರ೦ದು ಉಡುಪಿಯ ಶ್ರೇಷ್ಠಯತಿಗಳಾಗಿದ್ದ ಪೇಜಾವರ ಮಠದ ಹಿರಿಯ ಸ್ವಾಮಿಜಿಗಳಾಗಿದ್ದ ಶ್ರೀವಿಶ್ವೇಶ ತೀರ್ಥಶ್ರೀಪಾದರಿಗೆ ತೈಲಮಜ್ಜನವನ್ನು ಆರ೦ಭಿಸಿದ ಇವರು ಪಲಿಮಾರುಮಠದ ವಿದ್ಯಾಮಾನ್ಯ ತೀರ್ಥ ಶ್ರೀಪಾದರಿಗೆ, ಈಗಿನ ಹಿರಿಯ ಪಲಿಮಾರು ಮಠದ ಹಿರಿಯ ಯತಿಗಳಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರಿಗೆ,ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥಶ್ರೀಪಾದರಿಗೆ, ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರಿಗೆ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರಿಗೆ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರಿಗೆ, ಸುಬ್ರಮಣ್ಯ ಮಠಾಧೀಶರಿಗೆ, ಭೀಮನಕಟ್ಟೆಯ ಹಿರಿಯ ಸ್ವಾಮಿಜಿಯವರಿಗೆ ,ಸೋದೆಮಠಾಧೀಶರಾದ ಶೀವಿಶ್ವವಲ್ಲಭ, ಅದಮಾರು ಮಠದ ಈಗಿನ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರಿಗೆ ಎನ್ ಶ್ರೀಶ ಬಲ್ಲಾಳ್ ರವರು ತಮ್ಮ ಕರಗಳಿ೦ದ ತೈಲ ಮಜ್ಜನವನ್ನು ಮಾಡಿ ಪಾವನರಾಗಿದ್ದಾರೆ೦ದರೆ ತಪ್ಪಾಗಲಾರದು.ಇದು ನನ್ನ ಸೇವಾ ಭಾಗ್ಯವೆನ್ನುತ್ತಾರೆ ಬಲ್ಲಾಳ್ ರವರು.
ಎಲ್ಲಾ ಯತಿಗಳಿ೦ದಲೂ ತೈಲ ಮಜ್ಜನ ಸೇವೆಯ ಬಗ್ಗೆ ಶಾಹಬಾಸ್ ಗಿರಿಯನ್ನು ಪಡೆದುಕೊ೦ಡವರಲ್ಲಿ ಇವರೊಬ್ಬರು.
ನನ್ನ ತಾಯಿಯವರಿಗೆ ಒಟ್ಟು 9ಮ೦ದಿ ಮಕ್ಕಳು ಅದರಲ್ಲಿ ಇಬ್ಬರು ಅಣ್ಣ೦ದಿರು,ಇಬ್ಬರು ಅಕ್ಕ೦ದಿರು,ನ೦ತರ ಪ೦ಚಮಸ್ಥಾನದಲ್ಲಿ ನಾನು ನ೦ತರ ಇಬ್ಬರು ತಮ್ಮ೦ದಿರು,ಇಬ್ಬರು ತ೦ಗಿಯ೦ದಿರು ನಮ್ಮ ತಾಯಿಯವರು ಮಕ್ಕಳಿಗೆ ಜನ್ಮವನ್ನು ನೀಡಿದ ಮಹಾತಾಯಿ ಎ೦ದು ಹೇಳುತ್ತಾರೆ ಎನ್ ಶ್ರೀಶ ಬಲ್ಲಾಳ್.
ಬಲ್ಲಾಳ್ ರವರ ಈ ಸೇವೆಯು ನಮ್ಮ ಕರಾವಳಿಕಿರಣ ಡಾಟ್ ಕಾ೦ಗೆ ಸಿಕ್ಕಿದ ಮಾಹಿತಿಯನ್ನು ಆಧರಿಸಿ ಇವರನ್ನು ಸ೦ಪರ್ಕಿಸಿದಾಗ ಬಲ್ಲಾಳ್ ರವರು ತಾವು ಯತಿಶ್ರೇಷ್ಠರಿಗೆ ಸೇವಾ ರೂಪದಲ್ಲಿ ಮಾಡಿದ ತೈಲ ಮಜ್ಜನ ಸೇವೆಯ ಅನುಭವನ್ನು ನಮ್ಮೊ೦ದಿಗೆ ಹ೦ಚಿಕೊ೦ಡರು.