ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬಿ. ಕೆ. ಹರಿಪ್ರಸಾದ್ ಹೇಳಿಕೆ ಅವರ ಮಾನಸಿಕತೆಯ ಪ್ರತಿಬಿಂಬ :ಕೆ. ಉದಯಕುಮಾರ್ ಶೆಟ್ಟಿ
ಉಡುಪಿ: ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಹೇಳಿಕೆ ಈಗಿನ ಅವರ ಮಾನಸಿಕತೆಯನ್ನು ತೋರಿಸುತ್ತದೆ.ಬ್ರಿಟಿಷರ ಬೂಟು ನೆಕ್ಕುವ ಸಂಸ್ಕೃತಿ ನಮ್ಮದಲ್ಲ. ಬಿ. ಜೆ. ಪಿ.ದೇಶಕ್ಕಾಗಿ ಹೋರಾಟ ಮಾಡಿದ ಸ್ವಾತಂತ್ರ ವೀರರ, ಗಡಿಯಲ್ಲಿ ನಮ್ಮನ್ನು ಕಾಯುವ ವೀರ ಯೋಧರ,ಶೋಷಿತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬೂಟು ಒರೆಸುವ ಕೆಲಸ ಮಾಡುತ್ತೆ.
ನೀವು ಇಟಲಿ ಮಹಿಳೆಯ ಸೆರಗಿನ ಹಿಂದೆ ರಾಜಕೀಯ ಮಾಡುತ್ತ ಇನ್ನೂ ಅದೇ ಪಳೆಯುಳಿಕಗೆ ಜೋತು ಬಿದ್ದವರು. ನಿಮಗೆ ದೇಶಪ್ರೇಮಿಗಳು ದೇಶದ್ರೋಹಿಗಳಂತೆ, ದೇಶದ್ರೋಹಿಗಳು ದೇಶಪ್ರೇಮಿಗಳಂತೆ ಕಾಣ್ತಾರೆ.
ಬಿ. ಕೆ. ಹರಿಪ್ರಸಾದ್ ಅವರ ಇತ್ತೀಚಿನ ನಡವಳಿಕೆಗಳು ಕಾಂಗ್ರೆಸ್ ಮುಳುಗಿಸಲು ಸುಪಾರಿ ಪಡದಂತೆ ಬಾಸಾವಾಗುತ್ತಿದೆ ಎಂದು ಬಿ. ಜೆ. ಪಿ. ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.