Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ: ಕಾಳಿಂಗ ನಾವಡ ಪ್ರಶಸ್ತಿಗೆ ಖ್ಯಾತ ಭಾಗವತ ಸುರೇಶ್ ರಾವ್ ಆಯ್ಕೆ

ಉಡುಪಿ:ಡಿ,24.ಯಕ್ಷಗಾನ ಭಾಗವತಿಕೆಯ ಸ್ಥಾನಕ್ಕೆ ತಾರಾ ಮೆರುಗು ತಂದುಕೊಟ್ಟ ದಿವಗಂತ ಕಾಳಿಂಗ ನಾವಡ ಅವರ ನನೆಪಿನಲ್ಲಿ ಬೆಂಗಳೂರು ಮೂಲದ ಕಲಾಕದಂಬ ಆರ್ಟ್ ಸೆಂಟರ್ ಎಂಬ ಸಂಸ್ಥೆಯು ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ಕಾಳಿಂಗ ನಾವಡ ಪ್ರಶಸ್ತಿ ನೀಡಿಕೊಂಡು ಬರುತ್ತಿದೆ.

ಈ ಬಾರಿಯ 2023 ಸಾಲಿನ ಪ್ರಶಸ್ತಿಗೆ ಖ್ಯಾತ ಭಾಗವತ,ಪ್ರಸಂಗಕರ್ತ ಸುರೇಶ್ ರಾವ್ ಅವರು ಆಯ್ಕೆಯಾಗಿದ್ದಾರೆ.
ಇವರು ಸುಮಾರು 25 ವರ್ಷಗಳಿಂದ ಹೂವಿನ ಕೋಲಿನ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದು ಅದನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿಕೊಂಡು ಬರುತ್ತಿದ್ದಾರೆ.

ಇನ್ನು ಈ ಪ್ರಶಸ್ತಿಯು ಹತ್ತು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಕಾಳಿಂಗ ನಾವಡ ಪ್ರಶಸ್ತಿ ಒಳಗೊಂಡಿದೆ.

ಉಡುಪಿ ಜಿಲ್ಲೆಯ ಕೋಟ ಹಂದಟ್ಟು ಗ್ರಾಮದ ಉರಾಳ ಕೇರಿಯ ವೇದಿಕೆಯಲ್ಲಿ 25-12-2023 ರ ಸಂಜೆ 6 ಘಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

No Comments

Leave A Comment