ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಕೆನಡಾ ಬಳಿಕ ಅಮೆರಿಕಾದಲ್ಲೂ ಹಿಂದೂ ದೇವಾಲಯ ಧ್ವಂಸ: ಭಾರತ ವಿರೋಧಿ ಘೋಷಣೆ ಬರೆದ ಖಲಿಸ್ತಾನಿಗಳು
ಕ್ಯಾಲಿಫೋರ್ನಿಯಾ: ಅಮೆರಿಕಾದ ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿದ್ದು, ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಮತ್ತು ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದು ಹಾನಿ ಮಾಡಲಾಗಿದೆ.
ಹಿಂದೂ ಅಮೇರಿಕನ್ ಫೌಂಡೇಶನ್, ಕ್ಯಾಲಿಫೋರ್ನಿಯಾದ ನೆವಾರ್ಕ್‌ನಲ್ಲಿರುವ ಸ್ವಾಮಿನಾರಾಯಣ ಮಂದಿರ ವಸನಾ ಸಂಸ್ಥೆಯನ್ನು ಖಲಿಸ್ತಾನ್ ಪರ ಘೋಷಣೆಗಳಿಂದ ವಿರೂಪಗೊಳಿಸಲಾಗಿದೆ.
ಘಟನೆ ಕುರಿತು ಪ್ರಕಿತ್ರಿಯೆ ನೀಡಿರುವ ಅಮೆರಿಕಾ, ಇದು ದ್ವೇಷದ ಅಪರಾಧ ಎಂದು ಪರಿಗಣಿಸಲಾಗಿದ್ದು, ಸಂಪೂರ್ಣ ತನಿಖೆ ನಡೆಸುವ ಭರವಸೆ ನೀಡಿದೆ.
ಈ ಹಿಂದೆ ಜನವರಿ 31 ರಂದು, ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಪ್ರಮುಖ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದೊಂದಿಗೆ ಧ್ವಂಸಗೊಳಿಸಲಾಗಿತ್ತು. ಈ ಕೃತ್ಯಕ್ಕೆ ಭಾರತೀಯ ಸಮುದಾಯದಿಂದ ತೀವ್ ಆಕ್ರೋಶಗಳು ವ್ಯಕ್ತವಾಗಿತ್ತು.
ಈ ವರ್ಷದ ಏಪ್ರಿಲ್‌ನಲ್ಲಿ, ಕೆನಡಾದ ಒಂಟಾರಿಯೊದಲ್ಲಿರುವ ಮತ್ತೊಂದು ಹಿಂದೂ ದೇವಾಲಯದಲ್ಲಿ ಭಾರತ ವಿರೋಧಿ ಬರಹವನ್ನು ಹಾಕಲಾಗಿತ್ತು. ಇದೀಗ ಅಮೆರಿಕಾದಲ್ಲೂ ಇಂತಹದ್ದೇ ಕೃತ್ಯ ನಡೆದಿದ್ದು, ಇಂದು ಭಾರತೀಯರ ಕಣ್ಣು ಕೆಂಪಗಾಗುವಂತೆ ಮಾಡಿದೆ.