Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಧಾರವಾಡ: ಲಸಿಕೆ ಪಡೆದ ಮರುದಿನವೇ 2 ವರ್ಷದ ಮಗು ಸಾವು; ಓವರ್ ಡೋಸ್ ಕಾರಣವೆಂದು ಪೋಷಕರ ಆರೋಪ

ಧಾರವಾಡ:  ಅಂಗನವಾಡಿ ಕೇಂದ್ರದ ಸಿಬ್ಬಂದಿಯಿಂದ ಲಸಿಕೆ ಪಡೆದ ಮರುದಿನ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ನಗರದ ಉಣಕಲ್‌ನಲ್ಲಿ ನಡೆದಿದೆ.‌

ಹುಬ್ಬಳ್ಳಿಯ ಸಾಯಿನಗರದ ಚಿರು ಮೃತ ಬಾಲಕ.  ಪ್ರತಿ ಗುರುವಾರ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಲಸಿಕೆ ಹಾಕಲಾಗುತ್ತದೆ. ತಮಗೆ ಲಸಿಕೆ ಹಾಸಿಕಲು ಇಷ್ಟವಿಲ್ಲ ಎಂದರೂ ಆಶಾ ಕಾರ್ಯಕರ್ತೆಯರು ಬಲವಂತವಾಗಿ ಲಸಿಕೆ ಹಾಕಿಸಿದ್ದಾರೆ ಎಂದು ಹೇಳಲಾಗಿದೆ.

ಬುಧವಾರ ಬಲವಂತವಾಗಿ ಆಶಾ ಕಾರ್ಯಕರ್ತೆಯರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಲಸಿಕೆ ಹಾಕಿದ್ದಾರೆ. ಗುರುವಾರ ಆಟವಾಡುತ್ತಿದ್ದ ಮಗು ಹಠಾತ್ ಸಾವನ್ನಪ್ಪಿದೆ.  ಗುರುವಾರ ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದ ಬಾಲಕನ ಕುಟುಂಬದವರು ಶುಕ್ರವಾರ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿ ಶವವನ್ನು ತಮ್ಮೊಂದಿಗೆ ಕೊಂಡೊಯ್ದರು.

ಅದೇ ಲಸಿಕೆಯನ್ನು ಇತರ ಮಕ್ಕಳಿಗೆ ನೀಡಲಾಗಿದೆ, ಅವರಲ್ಲಿ ಯಾರಿಗೂ  ಯಾವುದೇ ತೊಂದರೆ ಆಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ, ಆದರೆ ಘಟನೆಯ ಬಗ್ಗೆ ತನಿಖೆ ನಡೆಸಲು ಇಲಾಖೆ ಸಿದ್ಧವಾಗಿದೆ ಎಂದು ಹೇಳಿದೆ.

ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ.ಶಶಿ ಪಾಟೀಲ ಮಾತನಾಡಿ, ‘ಬುಧವಾರವೇ ಲಸಿಕೆ ಹಾಕಲಾಗಿದ್ದು, ಗುರುವಾರ ಮಗು ಆರೋಗ್ಯವಾಗಿದ್ದು, ಇತರ ಮಕ್ಕಳೊಂದಿಗೆ ಆಟವಾಡುತ್ತಿದೆ ಎಂದು ತಿಳಿದು ಬಂದಿದೆ. ಏಕಾಏಕಿ ಕೆಳಗೆ ಬಿದ್ದ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿನ ವೈದ್ಯರು ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿಸಿದರು. ನಾವು ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿಕೊಂಡೆವು ಆದರೆ ಶುಕ್ರವಾರ ಬೆಳಗ್ಗೆ ಬಾಲಕನ ಕುಟುಂಬದವರು ನಿರಾಕರಿಸಿದರು ಮತ್ತು ಶವವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು ಎಂದು ಹೇಳಿದ್ದಾರೆ.

ವೈದ್ಯಕೀಯ ನಿರ್ಲಕ್ಷ್ಯ ಅಥವಾ ಲಸಿಕೆಯ ಕೆಲವು ಪ್ರತಿಕ್ರಿಯೆಯಿಂದಾಗಿ ಸಾವು ಸಂಭವಿಸಿದೆ .  ಸಾವಿನ ನಿಖರವಾದ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದ್ದೆವು. ಆದರೆ ಈಗ ನಾವು ನಮ್ಮ ಮಗುವನ್ನು ಮರಳಿ ಪಡೆಯಲು ಸಾಧ್ಯವಿಲ್ಲ,  ಅವನ ಮರಣವಾಗಿದೆ, ಹೀಗಾಗಿ ನಮ್ಮ ಮಗುವಿಗೆ ತೊಂದರೆ ನೀಡಲು ನಾವು ಬಯಸುವುದಿಲ್ಲ. ಯಾವುದೂ ಅವನನ್ನು ಮರಳಿ ತರಲು ಸಾಧ್ಯವಿಲ್ಲ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.

No Comments

Leave A Comment