ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

141 ಸ೦ಸದ್ ಸದಸ್ಯರನ್ನು ಅಮಾನತು ಮಾಡುವ ಬದಲು ಕೇಂದ್ರದ ಬಿಜೆಪಿ ಸರಕಾರವನ್ನೇ ಅಮಾನತುಗೊಳಿಸಬೇಕಾಗಿದೆ ಗೆ ಮಾಡಿದರೆ ನಮ್ಮ ದೇಶದ ಜನರಿಗೆ ಒಳಿತಾಗ ಬಹುದಿತ್ತು – ಸುರೇಶ್ ಶೆಟ್ಟಿ ಬನ್ನಂಜೆ

ತಾವು ಅಧಿಕಾರದಲ್ಲಿ ಇದ್ದೇವೆ ಬಹುಮತ ತಮ್ಮದಾಗಿದೆ ಎಂದು ಅಹಂಕಾರದಿಂದ ವರ್ತಿಸಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಂಸತ್ತಿನಲ್ಲಿ ನಡೆದ ಕೃತ್ಯದ ಬ ಗ್ಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಉತ್ತರಿಸಲಾಗದೆ ಹೆದರಿ ಲೋಕಸಭೆ ಹಾಗೂ ರಾಜ್ಯಸಭೆಯ 141 ಸದಸ್ಯರನ್ನು ಅಮಾನತುಗೊಳಿಸಿದ್ದು ಖಂಡನೀಯ ಎ೦ದು ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿದ್ದಾರೆ .

ನಮ್ಮ ಭಾರತ ದೇಶದ ಜನರಿಗೆ ದಿನಕ್ಕೊಂದು ಸುಳ್ಳು ಹೇಳಿ ದಿನಕ್ಕೊಂದು ಕಾನೂನನ್ನು ಜಾರಿಗೆ ತಂದು ದೇಶದ ಸಂವಿಧಾನವನ್ನೇ ಮೂಲೆಗುಂಪು ಮಾಡಲು ಹೊರಟಿರುವ ಕೇಂದ್ರದ ಈ ಬಿಜೆಪಿ ಸರಕಾರ ಹಾಗೂ ಮೋದಿ ಹಾಗೂ ಅಮಿತ್ ಶಾ ರವರ ಕೆಟ್ಟ ನೀತಿಯಿಂದಾಗಿ ದೇಶದ ಜನರು ಸಂಕಷ್ಟ ಪಡುವಂತಾಗಿದೆ ನಮ್ಮ ದೇಶದ ಪ್ರಥಮ ಪ್ರಜೆ ನಮ್ಮ ದೇಶದ ರಾಷ್ಟ್ರಪತಿ ಇವರು ಮಧ್ಯ ಪ್ರವೇಶಿಸಿ ವಿರೋಧ ಪಕ್ಷದ ಗಳ ಸಂಸತ್ ಸದಸ್ಯರ ಅಮಾನತನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನವನ್ನು ನೀಡಿ ಕೇಂದ್ರ ಸರಕಾರದ ಚಳಿಗಾಲದ ಅಧಿವೇಶನವನ್ನು ವಿರೋಧ ಪಕ್ಷಗಳ ಜೊತೆ ಚರ್ಚೆಯನ್ನು ಮಾಡಿ ಸುಲಲಿತ ರೀತಿಯಲ್ಲಿ ಮುಕ್ತಾಯಗೊಳಿಸಬೇಕಾಗಿದೆ .

ಕೇಂದ್ರದ ಮೋದಿ ಸರಕಾರದ ಬೆಲೆ ಏರಿಕೆ ನೀತಿಯಿಂದಾಗಿ ನಮ್ಮ ದೇಶದ ಜನರು ಕಂಗಾಲಾಗಿದ್ದಾರೆ ನಮ್ಮ ದೇಶದ ಬಡ ಜನರಿಗೆ ಈ ಬೆಲೆ ಏರಿಕೆ ನೀತಿಯಿಂದಾಗಿ ದಿನದ ಒಂದು ಹೊತ್ತು ಊಟವನ್ನು ಮಾಡಲು ಆಗದಂತ ಪರಿಸ್ಥಿತಿ ಇದೆ ಬಿಜೆಪಿ ನಾಯಕರು ಹಾಗೂ ಮೋದಿಯವರು ಶ್ರೀಮಂತರ ಓಲೈಕೆ ಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ನಿಮಗೆ ನಿಜವಾಗಿ ಬಡವರ ಬಗ್ಗೆ ರೈತರ ಬಗ್ಗೆ ಮಧ್ಯಮ ವರ್ಗದವರ ಬಗ್ಗೆ ಕೂಲಿ ಕಾರ್ಮಿಕರಬಗ್ಗೆ ಕಾಳಜಿ ಇದ್ದ ರೇ ಬೆಲೆ ಏರಿಕೆಯನ್ನು ಕಡಿಮೆ ಗೊಳಿಸಿ. ಸಂಸತ್ತಿನೊಳಗೆ ಆಕ್ರಮವಾಗಿ ಪ್ರವೇಶಿಸಲು ಪಾಸ್ ನೀಡಿದಂತಹ ಬಿಜೆಪಿಯ ಸಂಸತ್ ಸದಸ್ಯ ಶ್ರೀ ಪ್ರತಾಪ್ ಸಿಂಹರವರ ಸದಸ್ಯತ್ವವನ್ನು ಈ ಕೂಡಲೇ ರದ್ದುಪಡಿಸಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.

kiniudupi@rediffmail.com

No Comments

Leave A Comment