Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಬೆಂಗಳೂರು ಗ್ರಾಮಾಂತರದಲ್ಲಿ ಕೋವಿಡ್ ಪತ್ತೆ: ಸ್ಪರ್ಶ ಮಕ್ಕಳಧಾಮದಲ್ಲಿದ್ದ ಮಗುವಿಗೆ ಕೊರೊನಾ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀತಿ ಮತ್ತೆ ಶುರುವಾಗಿದ್ದು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಇದೀಗ ಬೆಂಗಳೂರು ಗ್ರಾಮಾಂತರದಲ್ಲಿ ಮೊದಲ ಕೇಸ್ ಪತ್ತೆಯಾಗಿದೆ.

ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಸ್ಪರ್ಶ ಮಕ್ಕಳಧಾಮದಲ್ಲಿದ್ದ ಮಗುವಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಜ್ವರ, ಕೆಮ್ಮು ಎಂದು ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ. ಸದ್ಯ ತೀವ್ರ ಉಸಿರಾಟದ ತೊಂದರೆ (ಸಾರಿ) ಕೇಸ್ ಹಿನ್ನೆಲೆ ತಾಲೂಕು ಆಸ್ಪತ್ರೆಯಲ್ಲಿ ಮಗುವನ್ನು ಐಸೋಲೆಷನ್‍ನಲ್ಲಿ ಇರಿಸಲಾಗಿದೆ.

ಸ್ವರ್ಶ ಮಕ್ಕಳ ಧಾಮದಲ್ಲಿ ಮೊದಲ‌ ಕೊರೊನಾ ಕೇಸ್ ಹಿನ್ನೆಲೆಯಲ್ಲಿ ಮಕ್ಕಳ ಧಾಮದ 21 ಮಂದಿ ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಟೆಸ್ಟಿಂಗ್ ಮಾಡಲಾಗಿದೆ. ಗಂಟಲು ದ್ರವ ಸ್ಯಾಂಪಲ್ ಪಡೆದು ಅಧಿಕಾರಿಗಳು ಟೆಸ್ಟಿಂಗ್ ಗೆ ಕಳುಹಿಸಲಾಗಿದೆ.

ಪಾಸಿಟಿವ್‌ ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಸಿಬ್ಬಂದಿ ಮಕ್ಕಳ ಧಾಮ ಹಾಗೂ ಶಾಲೆಗೆ ಸ್ಯಾನಿಟೈಸ್ ಮಾಡಲಿದ್ದಾರೆ. ಟೆಸ್ಟಿಂಗ್ ರಿಪೋರ್ಟ್ ಬರುವವರೆಗೂ ಎಲ್ಲಾ ಮಕ್ಕಳು ಹೋಂ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಶಾಲೆ ಹಾಗೂ ಮಕ್ಕಳಧಾಮದಲ್ಲಿ ಕೆಮ್ಮು, ನೆಗಡಿ ಹಾಗೂ ಜ್ವರ ಇದೆಯಾ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಮಕ್ಕಳ‌ ಜೊತೆ ಸಂಪರ್ಕದಲ್ಲಿದ್ದವರ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

No Comments

Leave A Comment