Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವಕ್ಕೆ” ಚಪ್ಪರ ಮುಹೂರ್ತ” ಸ೦ಪನ್ನ…

ಉಡುಪಿ:ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರ ಚತುರ್ಥ ಪರ್ಯಾಯೋತ್ಸವವು 2024ರಿ೦ದ 2026ನೇ ಇಸವಿಯವರೆಗೆ ಜರಗಲಿದೆ. ಆ ಪ್ರಯುಕ್ತವಾಗಿ ಬುಧವಾರದ೦ದು (ಇ೦ದು)ಇಂದು ಬೆಳಿಗ್ಗೆ 7.45ರ ಶುಭ ಘಳಿಗೆಯಲ್ಲಿ ರಾಘವೇಂದ್ರ ಕೊಡಂಚರ ಪೌರೋಹಿತ್ಯದಲ್ಲಿ ಚಪ್ಪರ ಮುಹೂರ್ತ ಗೀತಾಮ೦ದಿರದ ಮು೦ಭಾಗದಲ್ಲಿ ನಡೆಸಲಾಯಿತು.

ಚಪ್ಪರ ನಿರ್ವಹಣೆಯ ರಾಜೇಶ್ , ಮುಚ್ಚೂರು ರಾಮಚಂದ್ರ ಭಟ್ ನಾಗರಾಜ್ಉಪಾಧ್ಯ ಹಾಗೂ ಶ್ರಿ ಮಠದ ಮೇಸ್ತ್ರಿ ಪದ್ಮನಾಭ ಎಸ್ ರವರಿಗೆ ಕಾರ್ಯ ನಿರ್ವಹಣೆಯ ಮುಹೂರ್ತ ಪ್ರಸಾದ ನೀಡಲಾಯಿತು.

ಇದೇ ಸ೦ದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ರಘುಪತಿ ಭಟ್ ರವರು ಪರ್ಯಾಯ ಪ್ರಚಾರಕ್ಕಾಗಿ ಮಾಡಲ್ಪಟ್ಟ ವಾಹನ ಸ್ಟಿಕರ್ಸ್ ಗಳನ್ನು ಬಿಡುಗಡೆಗೊಳಿಸಿದರು.

ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ ಕೋಶಾಧಿಕಾರಿ ಕೆ.ರಂಜನ್ ಕಲ್ಕೂ ರ್ , ಕಾರ್ಯದರ್ಶಿ ರಾಘವೇಂದ್ರ ಕಿಣಿ, ಸಮಿತಿಯ ಪದಾಧಿಾರಿಗಳಾದ ಗುರುರಾಜ ಉಪಾಧ್ಯ, ವಿಷ್ಣುಮೂರ್ತಿ ಉಪಾಧ್ಯ, ರವೀಂದ್ರ ಆಚಾರ್ಯ, ರಘುಪತಿ ರಾವ್, ಹಯವದನ ಭಟ್, ರಾಮ ಕೊಡಂಚ , ನಾಗರಾಜ ರಾವ್ , ರಾಮಚಂದ್ರ ಸನಿಲ್, ಶ್ರಿಮತಿ ಸುಮಿತ್ರಾ ಕೆರೆಮಠ, ಶ್ರೀಮತಿ ಅಮಿತ ಕ್ರಮಧಾರಿ, ಶ್ರಿಮತಿ ಸರೋಜಾ, ಶ್ರೀಮತಿ ಗೀತಾ ಮುಂತಾದ ಸದಸ್ಯರೂ ಉಪಸ್ಥಿತರಿದ್ದರು.ರಮೇಶ್ ಭಟ್ ಕೆ. ಸ್ವಾಗತಿಸಿ ಧನ್ಯವಾದವಿತ್ತರು.

 

 

 

 

No Comments

Leave A Comment