ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ಕಮಿನ್ಸ್ ದಾಖಲೆ ಮುರಿದ ಮಿಚೆಲ್ ಸ್ಟಾರ್ಕ್, 24.75 ಕೋಟಿ ರೂಗೆ ಕೋಲ್ಕತ್ತಾ ಪಾಲು
ದುಬೈ:ಡಿ 19 .ಐಪಿಎಲ್ 24 ಹರಾಜು ದುಬೈನಲ್ಲಿ ನಡೆಯುತ್ತಿದ್ದು ಆಸ್ಟ್ರೇಲಿಯಾ ತಂಡದ ವೇಗದ ಬೌಲರ್, ಆರ್ ಸಿ ಬಿ ತಂಡದ ಮಾಜಿ ಆಟಗಾರ ಮಿಚೆಲ್ ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ಸೇಲಾದ ಆಟಗಾರರಾಗಿದ್ದಾರೆ.
ಮಿಚೆಲ್ ಸ್ಟಾರ್ಕ್‌ಗೆ ಎಲ್ಲ ತಂಡಗಳ ನಡುವೆ ಬಿಗ್ ಬಿಡ್ ನಡೆದಿದ್ದು, ಅಂತಿಮವಾಗಿ ಕೆಕೆಆರ್ ತಂಡ 24 ಕೋಟಿ 75 ಲಕ್ಷ ಕೊಟ್ಟು ಸ್ಟಾರ್ಕ್‌ರನ್ನು ತಮ್ಮ ತಂಡಕ್ಕೆ ಖರೀದಿ ಮಾಡಿದೆ.
2 ಕೋಟಿ ಮೂಲಬೆಲೆ ಹೊಂದಿದ್ದ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಖರೀದಿಗೆ ಡೆಲ್ಲಿ-ಮುಂಬೈ-ಕೆಕೆಆರ್-ಗುಜರಾತ್ ನಡುವೆ ಭರ್ಜರಿ ಫೈಟ್ ನಡೆಯಿತು. ಇವರು ಅಂತಿಮವಾಗಿ ಬರೋಬ್ಬರಿ 24.75 ಕೋಟಿಗೆ ಸೇಲಾದರು.
ಇದರ ಮೊದಲು ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್‌ಗೆ 20.50 ಕೋಟಿ ರೂಪಾಯಿ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದ ಗರಿಷ್ಠ ಬಿಡ್ಡಿಂಗ್ ಆಗಿದ್ದು ಆದರೆ ಕೆಲವೇ ಹೊತ್ತಲ್ಲಿ ಸ್ಟಾರ್ಕ್ಎಲ್ಲಾ ದಾಖಲೆ ಮುರಿದಿದ್ದಾರೆ.