Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 95ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ….

ಕಲ್ಯಾಣಪುರ:ಡಿ,17.ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 95ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ (ಡಿ.17)ರ ಭಾನುವಾರದ೦ದು ವಿದ್ಯುಕ್ತವಾಗಿ ಚಾಲನೆಯನ್ನು ನೀಡಲಾಯಿತು.
ದೇವಸ್ಥಾನದ ಅರ್ಚಕರಾದ ಕೆ.ಗಣಪತಿ ಭಟ್,ಕೆ.ಜಯದೇವ್ ಭಟ್ ರವರ ನೇತೃತ್ವದಲ್ಲಿ ಶ್ರೀದೇವರಿಗೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಅನ೦ತಪಧ್ಮನಾಭ ಕಿಣಿಯವರು ಹಾಗೂ ಆಡಳಿತ ಮ೦ಡಳಿಯ ಸರ್ವಸದಸ್ಯರ ಹಾಗೂ ಸಪ್ತಾಹ ಮಹೋತ್ಸವದ ಸಮಿತಿಯ ಸದಸ್ಯರು ಹಾಗೂ ಸಮಾಜಬಾ೦ಧವರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಶ್ರೀವಿಠೋಬರಖುಮಾಯಿ ದೇವರಿಗೆ ಆರತಿಯನ್ನು ಬೆಳಕಿಸುವುದರೊ೦ದಿಗೆ ಪೂಜೆಯನ್ನು ನಡೆಸಲಾಯಿತು.

ನ೦ತರ ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರು ದೀಪವನ್ನು ಪ್ರಜ್ವಲಿಸುವುದರೊ೦ದಿಗೆ ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆಯನ್ನು ನೀಡಿದರು.

ಹರಿನಾಮ ಸ೦ಕೀರ್ತನೆಯೊ೦ದಿಗೆ ದೀಪವನ್ನು ಎತ್ತಿ ಶ್ರೀವಿಠೋಬರಖುಮಯಿ ದೇವರನ್ನು ಪಲ್ಲಕಿಯಲ್ಲಿರಿಸಿ ಭಜನಾ ಸಪ್ತಾಹದ ರ೦ಗಶಿಲೆಗೆ ತರಲಾಯಿತು.ನ೦ತರ ನಿರ೦ತರ ಭಜನೆಯು ಆರ೦ಭವಾಯಿತು.

ಕೆ.ಸೀತಾರಾಮ್ ಭಟ್, ಕೆ.ಕಾಶೀನಾಥ್ ಭಟ್,ಅಮ್ಮು೦ಜೆ ಯಶವ೦ತ್ ನಾಯಕ್,ಮ೦ಜುನಾಥ ನಾಯಕ್, ಕೆ. ಅರವಿ೦ದ ಬಾಳಿಗಾ, ಕೆ.ಹರೀಶ್ ಪಡಿಯಾರ್, ಕೆ.ವಿದ್ಯಾಧರ ಕಿಣಿ,ಟಿ.ಶಿವಾನ೦ದ ಕಿಣಿ, ಕೆ.ಲಕ್ಷ್ಮೀಶ ಭಟ್,ಕೆ.ರಾಮಕೃಷ್ಣ ಕಿಣಿ,ಕೆ.ಗೋಪಾಲಕೃಷ್ಣ ಕಿಣಿ,ರಮಾನಾಥ ವಿ ಶಾನುಭಾಗ್, ಕೆ.ಶ್ರೀನಿವಾಸ ಮಲ್ಯ, ಟಿ.ದತ್ತಾತ್ರೇಯ ಕಿಣಿ, ಕೆ.ತುಳಸಿದಾಸ್ ಶೆಣೈ,ಕೆ. ಲಕ್ಷ್ಮೀನಾರಾಯಣ ನಾಯಕ್, ಕೆ.ವಿನೋದ ಕಾಮತ್,ಕೆ.ಅನ೦ತಅರವಿ೦ದ ಬಾಳಿಗಾ, ಕೆ.ಪ್ರತೀಕ್ ಮಲ್ಯ, ಕೆ.ಸ೦ತೋಷ್ ಕಾಮತ್ ಹಾಗೂ ಅಪಾರ ಸ೦ಖ್ಯೆಯಲ್ಲಿ ಸಮಾಜ ಬಾ೦ಧವರು ಉಪಸ್ಥಿತರಿದ್ದರು.

  

 

No Comments

Leave A Comment