Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ವರ್ಷಗಳಿಂದ ಅತ್ತೆ-ಸೊಸೆ ನಡುವೆ ಮಾತಿಲ್ಲ: ಮಗಳೊಂದಿಗೆ ‘ಬಚ್ಚನ್’ ಮನೆಯಿಂದ ಹೊರಬಂದ್ರಾ ಐಶ್ವರ್ಯಾ ರೈ?

ಮುಂಬೈ: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ನಡೆಯುತ್ತಿರುವ ಬಿರುಕಿನ ಸುದ್ದಿಯ ಗಾಸಿಪ್ ಇದೀಗ ನಿಜವಾಗುತ್ತಿದೆ ಎಂದು ಹೇಳಲಾಗಿದ್ದು. ಬಚ್ಚನ್ ಮನೆಯಿಂದ ಐಶ್ವರ್ಯಾ ಬಚ್ಚನ್ ತಮ್ಮ ಮಗಳೊಂದಿಗೆ ಹೊರ ಬಂದಿದ್ದಾರೆ ಎಂದು ಸುದ್ದಿಯಾಗಿದೆ.

ಜೂಮ್ ವೆಬ್ ಸೈಟ್ ವರದಿ ಪ್ರಕಾರ ಐಶ್ವರ್ಯಾ ರೈ ತನ್ನ ಮಗಳು ಆರಾಧ್ಯ ಬಚ್ಚನ್ ನೊಂದಿಗೆ ಬಚ್ಚನ್ ಮನೆ ಜಲ್ಸಾದಿಂದ ಹೊರಗೆ ಬಂದಿದ್ದಾರೆ. ಇದೀಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಐಶ್ವರ್ಯಾ ಮತ್ತು ಅವರ ಅತ್ತೆ ಜಯಾ ಬಚ್ಚನ್ ಕಳೆದ ಕೆಲವು ವರ್ಷಗಳಿಂದ ಯಾವುದೇ ರೀತಿಯ ಮಾತುಕತೆ ಇಲ್ಲದೆ ದೂರವಿದ್ದಾರೆ.ಆದರೆ ಅಭಿಷೇಕ್ ತನ್ನ ಹೆತ್ತವರಿಗೆ ನಿಷ್ಠೆ ಮತ್ತು ತನ್ನ ಹೆಂಡತಿ ಮತ್ತು ಮಗಳ ಬಗೆಗಿನ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಈ ನಡುವೆ ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ಗಂಡನಿಂದ ದೂರವಾಗಿ ಇದೀಗ ಅಮಿತಾಬ್ ಬಚ್ಚನ್ ಮನೆಗೆ ಬಂದಿದ್ದು, ಈ ಗಲಾಟೆ ಮತ್ತಷ್ಟು ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ. ಮಾಹಿತಿ ಪ್ರಕಾರ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹ ವಿಚ್ಚೇದನ ಪಡೆಯುವ ಸಾಧ್ಯತೆಗಳು ತುಂಬಾ ಕಡಿಮೆ ಇದೆ. ಆದರೆ ಐಶ್ವರ್ಯಾ ಮಾತ್ರ ತನ್ನ ಮಗಳೊಂದಿಗೆ ಬಚ್ಚನ್ ಪ್ಯಾಮಿಲಿಯಿಂದ ದೂರ ಉಳಿಯಲಿದ್ದಾರೆ.

ಇದಕ್ಕೂ ಮೊದಲು ಅಮಿತಾಭ್ ಬಚ್ಚನ್ ಅವರು ಐಶ್ವರ್ಯಾ ಅವರ ಇನ್‌ಸ್ಟಾ ಅನ್ ಫಾಲೋ ಮಾಡಿದ ಬೆನ್ನಲ್ಲೇ, ಐಶ್ವರ್ಯಾ ಮತ್ತು ಅಭಿಷೇಕ್ ಡಿವೋರ್ಸ್ ಆಗಲಿದ್ದಾರೆಂಬ ಸುದ್ದಿ ಹರಡಿತ್ತು. ಐಶ್ವರ್ಯಾ ಬಚ್ಚನ್ ನಿವಾಸದಿಂದ ಹೊರಬಂದಿದ್ದಾರೆ. ಅವರು ಈಗ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ತಾಯಿಯ ಮನೆಯಲ್ಲಿ ಕಳೆಯುತ್ತಾರೆ.

ಐಶ್ವರ್ಯಾ ಮತ್ತು ಅವರ ಅತ್ತೆ ಜಯಾ ಬಚ್ಚನ್ ಕಳೆದ ಕೆಲವು ವರ್ಷಗಳಿಂದ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಇಬ್ಬರು ಪರಸ್ಪರ ನಿರ್ಲಕ್ಷಿಸಿದ್ದಾರೆ ಎಂದು ಹಲವಾರು ವರದಿಗಳು ಹೇಳುತ್ತಿವೆ.

No Comments

Leave A Comment