ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ನಿರ್ವಾಹಣೆ ಇಲ್ಲದೆ ಹಳ್ಳ ಹಿಡಿಯುತ್ತಿವೆ ಬಿಜೆಪಿ ಸರ್ಕಾರದ ನಮ್ಮ ಕ್ಲಿನಿಕ್​ಗಳು; 8 ತಿಂಗಳಿಂದ ಬಾಗಿಲು ತೆರೆದಿಲ್ಲ, ಚಿಕಿತ್ಸೆಯೂ ಇಲ್ಲ

ಬೆಂಗಳೂರು: ಡಿ.16: ಬಿಜೆಪಿ (BJP) ಸರ್ಕಾರದ ನಮ್ಮ‌ ಕ್ಲಿನಿಕ್ (Namma Clinic) ಯೋಜನೆಯಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ನಮ್ಮ ಕ್ಲಿನಿಕ್ ಗಳು ಹಳ್ಳ ಹಿಡಿತಾ ಇದಿಯಾ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಾಕವಿ ಕುವೆಂಪು ಮೆಟ್ರೋ ಬಳಿಯಿರುವ ಕ್ಲಿನಿಕ್‌ ಕಳೆ‌ದ 8 ತಿಂಗಳಿಂದ ಬಾಗಿಲು ತೆಗೆದಿಲ್ಲ. ಲಕ್ಷಾಂತರ ರೂಪಾಯಿ ಹಣ ವ್ಯರ್ಥವಾಗುತ್ತಿದೆ. ಬಿಬಿಎಂಪಿ (BBMP) ನಿರ್ಲಕ್ಷ್ಯದಿಂದಾಗಿ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಬಂದಿದ್ದು, ಕೂಡಲೆ ಆಸ್ಪತ್ರೆ ಪುನರಾರಂಭಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಬೆಂಗಳೂರಿನ ಮಹಾಕವಿ ಕುವೆಂಪು ಮೆಟ್ರೋ ಬಳಿಯಿರುವ ನಮ್ಮ ಕ್ಲಿನಿಕ್‌ಗೆ ಡಾಕ್ಟರ್​ಗಳು ಬಾರದೆ ಬೀಗ ಬಿದ್ದಿದೆ. ಬೀಗ ಹಾಕಿ 8 ತಿಂಗಳುಗಳೇ ಕಳೆದರು ಬಿಬಿಎಂಪಿ ನಿರ್ಲಕ್ಷ್ಯ ವಹಿಸುತ್ತಿದೆ. ಬೆಳಿಗ್ಗೆ, ಸಾಯಂಕಾಲ ಎರಡು ಪಾಳಿಯಲ್ಲಿ ನಮ್ಮ ಕ್ಲಿನಿಕ್ ‌ಕಾರ್ಯ ನಿರ್ವಹಿಸುತ್ತಿತ್ತು.‌ ಬಿಬಿಎಂಪಿ‌ ವ್ಯಾಪ್ತಿಯಲ್ಲಿ ಅತಿ‌ ಹೆಚ್ಚು ಜನರು ನಮ್ಮ‌ ಕ್ಲಿನಿಕ್​ಗೆ ಬಂದು‌ ಚಿಕಿತ್ಸೆ ಪಡೆಯುತ್ತಿದ್ರು.‌ ಆದರೆ ರೋಗಿಗಳಿಗೆ ಉಪಯೋಗವಾಗಬೇಕಿದ್ದ ನಮ್ಮ ಕ್ಲಿನಿಕ್​ಗಳಿಗೆ ಈಗ ಒಂದೊಂದಾಗಿ ಬೀಗ ಹಾಕಲಾಗುತ್ತಿದೆ. ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಬಂದಿದ್ದು, ಕೂಡಲೆ ಆಸ್ಪತ್ರೆ ಪುನರಾರಂಭಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಈ ಬಗ್ಗೆ ಬಿಬಿಎಂಪಿ ಆರೋಗ್ಯ ಇಲಾಖೆ ಸಂಬಂಧಪಟ್ಟ ವಿಶೇಷ ಆಯುಕ್ತರನ್ನ ಕೇಳಿದರೆ, ನಮ್ಮ ಕ್ಲಿನಿಕ್​ಗಳು‌ ಬಡವರಿಗಾಗಿ, ಕಾರ್ಮಿಕರಿಗಾಗಿ ಬೆಳಿಗ್ಗೆ, ಸಾಯಂಕಾಲ‌ ನಿಗಧಿ ಮಾಡಿದ ಸಮಯದಲ್ಲಿ ತೆರೆಯಬೇಕು. ಬರುವಂತಹ ಬಡ ರೋಗಿಗಳಿಗೆ ಉಪಯೋಗ ಆಗಬೇಕು ಅಂತ ಸರ್ಕಾರ ಬೆಂಗಳೂರಿನ ಪ್ರತಿ ವಾರ್ಡ್ ಗೆ ಒಂದರಂತೆ 144 ನಮ್ಮ‌ ಕ್ಲಿನಿಕ್​ಗಳನ್ನ ತೆರೆದಿದೆ. ಈ ಕ್ಲಿನಿಕ್​ಗಳಿಗೆ ಸರಿಯಾಗಿ ವೈದ್ಯರು ಬರುತ್ತಿಲ್ಲ. ಹಾಗೂ ಮಹಾಕವಿ ಕುವೆಂಪು ಮೆಟ್ರೋ ಬಳಿ ಇರುವ ನಮ್ಮ‌ ಕ್ಲಿನಿಕ್ ಓಪನ್ ಮಾಡುತ್ತಿಲ್ಲ ಎಂಬುದು ನಿಮ್ಮ ಮೂಲಕ ಗಮನಕ್ಕೆ ಬಂದಿದೆ. ಈ ಬಗ್ಗೆ ನಾವು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಬಡ ರೋಗಿಗಳ ಪಾಲಿಗೆ ಸಂಜೀವಿನಿ ಆಗಬೇಕಿದ್ದ ಆಸ್ಪತ್ರೆಗಳು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನಾದರು ಅಧಿಕಾರಿಗಳು ಕೊಟ್ಟ ಭರವಸೆಯಂತೆ ಕ್ರಮಕ್ಕೆ ಮುಂದಾಗುತ್ತಾರಾ ಇಲ್ವಾ ಕಾದು ನೋಡಬೇಕಿದೆ.

No Comments

Leave A Comment