ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ ಚಂದ್ರಮೌಳೀಶ್ವರ ದೇವಸ್ಥಾನದ ರಥೋತ್ಸವ -ಶ್ರೀ ಪುತ್ತಿಗೆ ಪರ್ಯಾಯ ಸಂಭ್ರಮ” ಅನಂತ ದ್ವಾರ ” ವಿದ್ಯುಕ್ತವಾಗಿ ಉದ್ಘಾಟನೆ…
ಉಡುಪಿಯ ಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ರಥೋತ್ಸವ ಇಂದು ಬೆಳಿಗ್ಗೆ ಭಾವಿ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ರಥಬೀದಿಯಲ್ಲಿ ಪರ್ಯಾಯೋತ್ಸವದ ” ಅನಂತ ದ್ವಾರ “ ಸ್ವಾಗತ ಮಂಟಪದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀಪಾದರು ನೆರವೇರಿಸಿದರು.ಸ೦ಜೆ ವಿಶೇಷ ಬ್ಯಾ೦ಡ್ ವಾದ್ಯ, ಸುಡುಮದ್ದುಸುಡುವುದರೊ೦ದಿಗೆ ಶ್ರೀದೇವರ ರಥೋತ್ಸವವು ರಥಬೀದಿಯಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ಜರಗಿತು.ಸಾವಿರಾರು ಮ೦ದಿ ಭಕ್ತರು ಈ ಉತ್ಸವದಲ್ಲಿ ಭಾಗವಹಿಸಿದ್ದರು.ಮಠದಿವಾನರಾದ ನಾಗರಾಜ ಆಚಾರ್ಯ,ಪ್ರಸನ್ನ ಆಚಾರ್ಯ,ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಉಪಾಧ್ಯಾಯರವರು ಉಪಸ್ಥಿತರಿದ್ದರು.