ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಉಡುಪಿ: ದತ್ತು ಮಗಳು ನಾಪತ್ತೆ, ಮನನೊಂದ ರಂಗಭೂಮಿ ಕಲಾವಿದ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

ಉಡುಪಿ, ಡಿ.14: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ನಿವಾಸದಿಂದ 17 ವರ್ಷದ ದತ್ತು ಮಗಳು ನಾಪತ್ತೆಯಾದ ಕೆಲವೇ ಗಂಟೆಗಳ ನಂತರ, ಖ್ಯಾತ ರಂಗಭೂಮಿ ಕಲಾವಿದ (Theatre Artist), ರಂಗ ತರಂಗ ನಾಟಕ ಸಂಸ್ಥೆಯ ಸಂಸ್ಥಾಪಕರಾಗಿದ್ದ ಲೀಲಾಧರ ಶೆಟ್ಟಿ (68) ಮತ್ತು ಅವರ ಪತ್ನಿ ವಸುಂಧರಾ ಎಲ್ ಶೆಟ್ಟಿ (59) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಶೆಟ್ಟಿ ದಂಪತಿಗಳು ಸುಮಾರು 16 ವರ್ಷಗಳ ಹಿಂದೆ ಓರ್ವ ಬಾಲಕಿಯನ್ನು ದತ್ತು ಪಡೆದಿದ್ದರು. ಕಾಪು ತಾಲೂಕಿನ ಮಜೂರು ಗ್ರಾಮದ ಕರಂದಾಡಿ ಗ್ರಾಮದಲ್ಲಿ ವಾಸವಿದ್ದ ದಂಪತಿ ಮಂಗಳವಾರ ಮಗಳು ನಾಪತ್ತೆಯಾಗಿದ್ದರಿಂದ ತೀವ್ರ ನೊಂದುಕೊಂಡಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಡಿಸೆಂಬರ್ 12ರ ರಾತ್ರಿ 11:20 ರಿಂದ ಡಿಸೆಂಬರ್ 13 ರ ಬೆಳಗ್ಗೆ 12:30 ರ ನಡುವೆ ದಂಪತಿ ಸೀರೆ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಮತ್ತೊಂದೆಡೆ ಮೃತ ದಂಪತಿ ಮಗಳು ಕಾಣೆಯಾದ ಬಗ್ಗೆ ಮೃತ ಲೀಲಾಧರ್ ಅವರ ಸಂಬಂಧಿ ಮೋಹನ್ ಕುಮಾರ್ ಡಿ ಶೆಟ್ಟಿ ಅವರು ದೂರು ನೀಡಿದ್ದು ದೂರಿನ ಆಧಾರದ ಮೇಲೆ ಕಾಪು ಪೊಲೀಸರು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಲ್ಲು ಹೃದಯ ಹಿಂಡುವ ಪ್ರಕರಣ, ಜೋಗಿ ಸಿನಿಮಾ ರೀತಿ ಹೆತ್ತ ತಾಯಿಯ ಹೆಣದ ಮುಂದೆ ಅಬೋಧ ಕಂದಮ್ಮ ಕಿಲಕಿಲ

ಈ ಹಿಂದೆ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲೀಲಾಧರ್ ಅವರು ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಹೆಸರಾಂತ ನಾಟಕ ತಂಡವು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಮತ್ತು ಅವರು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರೊಂದಿಗೆ ನಿಕಟ ಒಡನಾಟವನ್ನು ಹೊಂದಿದ್ದರು.

ಇದಲ್ಲದೇ ಕಾಪು ಬಂಟರ ಸಂಘದ ಮುಂಚೂಣಿಯಲ್ಲಿದ್ದು ಪ್ರವೀಣ ನಟ-ನಿರ್ದೇಶಕರಾಗಿ ಮನ್ನಣೆ ಗಳಿಸಿದ್ದರು. ಜಿಲ್ಲೆಯ ಹೆಸರಾಂತ ಸಮಾಜಸೇವಕ ರಂಗ ತರಂಗ ನಾಟಕ ಸಂಸ್ಥೆಯ ಸಂಸ್ಥಾಪಕರಾಗಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

No Comments

Leave A Comment