ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
Lok Sabha secretariat suspends 8 personnel for security breach/ಸಂಸತ್ನಲ್ಲಿ ಭದ್ರತಾ ಲೋಪ: 8 ಸಿಬ್ಬಂದಿ ಅಮಾನತು
The Lok Sabha Secretariat has suspended eight personnel for the security breach in Parliament, sources said on Thursday.
Those suspended have been identified as Rampal, Arvind, Vir Das, Ganesh, Anil, Pradeep, Vimitt and Narendra.
In a major security breach on the anniversary of the 2001 Parliament terror attack on Wednesday, two persons – Sagar Sharma and Manoranjan D — jumped into the Lok Sabha chamber from the public gallery during Zero Hour, released yellow gas from canisters and shouted slogans before being overpowered by the MPs.
ಸಂಸತ್ತಿನಲ್ಲಾದ ಭದ್ರತಾ ಲೋಪ(Security Breach)ದ ಹಿನ್ನೆಲೆಯಲ್ಲಿ 8 ಸಿಬ್ಬಂದಿಯನ್ನು ಲೋಕಸಭೆ ಕಾರ್ಯಾಲಯ ಅಮಾನತುಗೊಳಿಸಿದೆ. ಬುಧವಾರ ಸಂಸತ್ತಿನ ಭದ್ರತೆಯಲ್ಲಿ ಭಾರೀ ಲೋಪವಾಗಿತ್ತು, ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಸಂಸದರಿದ್ದ ಸ್ಥಳಕ್ಕೆ ಆಗಮಿಸಿ ಅಶ್ರುವಾಯು ಸಿಡಿಸಿದ್ದರು.
ಈ ಘಟನೆ ಕುರಿತು ಲೋಕಸಭೆ ಸೆಕ್ರಟರಿಯೇಟ್ ಮಹತ್ವದ ಕ್ರಮ ಕೈಗೊಂಡಿದೆ. ಭದ್ರತಾ ಉಲ್ಲಂಘಟನೆಗಾಗಿ 8 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂಸತ್ತಿನ ಭದ್ರತಾ ಲೋಪದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಾಗರ್ ಶರ್ಮಾ, ಮನೋರಂಜನ್, ನೀಲಂ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಯೋಜನೆಯನ್ನು 6 ಮಂದಿ ಒಟ್ಟಾಗಿ ಯೋಜಿಸಿದ್ದರು, ನಾಲ್ಕು ಜನರು ಒಂದೇ ಗುಂಪಿನ ಭಾಗವಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ 120 ಬಿ(ಕ್ರಿಮಿನಲ್ ಪಿತೂರಿ), 452(ಅನುಮತಿ ಇಲ್ಲದೆ ಪ್ರವೇಶ), 153(ಗಲಭೆಗೆ ಪ್ರಚೋದನೆ), 186(ಸಾರ್ವಜನಿಕ ಸೇವೆಗೆ ಅಡ್ಡಿಪಡಿಸುವುದು)ಅಡಿಯಲ್ಲಿ ಪ್ರಕರಣ ದಾಖಲಾಗಿದೆ.