ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಶ್ರೀಕ್ಷೇತ್ರ ಕಲ್ಯಾಣಪುರ ವೆ೦ಕಟರಮಣ ದೇವಸ್ಥಾನಕ್ಕೆ ಗೋಕರ್ಣಮಠಾಧೀಶರ ಪ್ರಥಮ ಭೇಟಿ ಅದ್ದೂರಿಯಿ೦ದ ಸ೦ಪನ್ನ…

ಉಡುಪಿ: ಡಿ.8, ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಗುರುವಾರದ೦ದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಭೇಟಿ ನೀಡಿದರು.

ಪ್ರಥಮ ಬಾರಿಗೆ ಶ್ರೀಕ್ಷೇತ್ರಕ್ಕೆ ಆಗಮಿಸಿರುವ ಶ್ರೀಗಳವರನ್ನು ಪೂರ್ಣಕುಂಭ, ಮಂಗಳ ವಾದ್ಯದೊಂದಿಗೆ ಬರಮಾಡಿಕೊಳ್ಳಲಾಯಿತು.

ಬಳಿಕ ದೇವಳದ ವತಿಯಿಂದ ಶ್ರೀಪಾದರಿಗೆ ಪಾದಪೂಜೆ, ಗುರು ಕಾಣಿಕೆ ಸಮರ್ಪಿಸಲಾಯಿತು.

ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಭಕ್ತರು ದೇವರ ಬಳಿ ತಮ್ಮ ಸಮಸ್ಯೆ ತಿಳಿಸುವ ಬದಲು ದೇವರ ಬಗ್ಗೆ ಚಿಂತಿಸಬೇಕು ಎಂದರು.
ದೇವಳದ ಜೀರ್ಣೋದ್ಧಾರದಿಂದ ಊರು, ರಾಜ್ಯ ರಾಷ್ಟ್ರ ಉದ್ಧಾರ ಸಾಧ್ಯ. ಈ ನಿಟ್ಟಿನಲ್ಲಿ ಹಮ್ಮಿಕೊಂಡ ಜೀರ್ಣೋದ್ದಾರ ಕಾರ್ಯ ಶೀಘ್ರ ನೆರವೇರಲಿ ಎಂದು ಹರಸಿದರು.

 

ದೇವಳದ ಆಡಳಿತ ಮೊಕ್ತಸರ ಅನಂತ ಪದ್ಮನಾಭ ಕಿಣಿ, ಪ್ರಧಾನ ಅರ್ಚಕ ಜಯದೇವ ಭಟ್, ಗಣಪತಿ ಭಟ್, ಅರವಿಂದ ಬಾಳಿಗಾ, ದತ್ತಾತ್ರೇಯ ಕಿಣಿ, ವಿನೋದ್ ಕಾಮತ್, ಲಕ್ಷ್ಮೀನಾರಾಯಣ ನಾಯಕ್, ವಿದ್ಯಾಧರ ಕಿಣಿ, ಸುದೇಶ್ ಭಟ್, ಅಮ್ಮುಂಜೆ ಯಶವಂತ ನಾಯಕ್, ಶಿವಾನಂದ ಕಿಣಿ, ಶ್ರೀನಿವಾಸ ಮಲ್ಯ,ಅನ೦ತ ಬಾಳಿಗಾ, ಜೀರ್ಣೋದ್ದಾರ ಸಮಿತಿ ಸದಸ್ಯರು, ಜಿ.ಎಸ್.ಬಿ ಸಮಾಜ ಬಾಂಧವರು ಇದ್ದರು.

 

No Comments

Leave A Comment