Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ತೆಲಂಗಾಣದಲ್ಲಿ ತಮ್ಮ ಹಿಡಿತವನ್ನು ಸಾಧಿಸಲು ಹೊರಟ ಬಿಜೆಪಿ ಹಾಗೂ ಮೋದಿಯ ಕಡೆಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವನ್ನು ನೀಡಿದ ತೆಲಂಗಾಣ ಜನತೆ-ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ:ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದಿಂದ ಅಧಿಕಾರದ ಗದ್ದುಗೆ ಪಡೆದುಕೊಂಡಿದ್ದು ಇದು ನರೇಂದ್ರ ಮೋದಿ ಅವರ ಪಾಲಿಗೆ ಹಾಗೂ ಬಿಜೆಪಿಯವರ ಪಾಲಿಗೆ ಬಿಸಿ ತುಪ್ಪವಾಗಿ ಪರಿಗಣಿಸಿದೆ ತೆಲಂಗಾಣದಲ್ಲಿ ತಾವು ಅಧಿಕಾರಕ್ಕೆ ಬಂದು ದಕ್ಷಿಣ ಭಾರತದಲ್ಲಿ ನಮ್ಮ ಹಿಡಿತವನ್ನು ಸಾಧಿ ಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುಮತವನ್ನು ಗಳಿಸುತ್ತೇವೆ ಎಂಬ ಭ್ರಮೆಯಲ್ಲಿದ್ದ ಮೋದಿಯವರಿಗೆ ತೆಲಂಗಾಣದ ಜನತೆ ಬಿಸಿ ಮುಟ್ಟಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ಧೂಳಿಪಟವಾಗಿದೆ ಕೇಂದ್ರದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಬಿಜೆಪಿಯವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮಧ್ಯ ಪ್ರದೇಶ ಛತ್ತಿಸ್ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಐಟಿ ಹಾಗೂ ಈಡಿ ದಾಳಿ ನಡೆಸಿ ಕಾಂಗ್ರೆಸ್ ಪಕ್ಷದ ನಾಯಕರು ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿ.ಮತಯ೦ತ್ರವನ್ನು ದುರುಪಯೋಗ ಪಡಿಸಿ, ಅಪಪ್ರಚಾರವನ್ನು ಮಾಡಿ ಬಿಜೆಪಿಯವರು ಗೆಲವು ಸಾಧಿಸಿರಬಹುದು ಆದರೆ ಇದು ಬಿಜೆಪಿಯವರ ನೈತಿಕ ಗೆಲುವಲ್ಲ ಕೇವಲ ಸುಳ್ಳಿನ ಸರಮಾಲೆ ಹಾಗೂ ಅಧಿಕಾರದ ದುರ್ಬಳಕೆ ಗೆಲುವು .

ಮುಂದೆ ನಡೆವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಬೆಲೆ ಏರಿಕೆ ನೀತಿಗೆ ನಮ್ಮ ಭಾರತ ದೇಶದ ಜನರು ತಕ್ಕ ಪಾಠವನ್ನು ಕಲಿಸ ಲಿದಿದ್ದಾರೆ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೇಳಿದ ಮೋದಿ ಹಾಗೂ ಅಮಿತ್ ಶಾ ರವರಿಗೆ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷವು ಪ್ರಬಲ ಪೈಪೋಟಿಯನ್ನು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನೀಡಿದೆ ಇದು ಮೋದಿ ಅವರ ಹಾಗೂ ಬಿಜೆಪಿ ನಾಯಕರುಗಳ ನಿದ್ದೆ ಕೆಡಿಸಿದಂತಾಗಿದೆ ಕರ್ನಾಟಕದಲ್ಲಿ ನೀಡಿದಂತಹ ಗ್ಯಾರೆಂಟಿ ಯೋಜನೆಗಳನ್ನು ವಿರೋಧಿಸಿದ ಮೋದಿ ಅವರೇ ಸ್ವತಹ ಗ್ಯಾರೆಂಟಿಯನ್ನು ಘೋಷಿಸುವಂತೆ ಕಾಂಗ್ರೆಸ್ ಪಕ್ಷವು ಮಾಡಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನ೦ಜೆ ತಿಳಿಸಿದ್ದಾರೆ.

No Comments

Leave A Comment