ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಡಿ.7ಇ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ
ಉಡುಪಿ:ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನಕ್ಕೆ ಡಿಸೆ೦ಬರ್ 7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಪರಮಪೂಜ್ಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧಿಪತಿ ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿಯವರ ಪ್ರಥಮ ಭೇಟಿ ನೀಡಲಿದ್ದಾರೆ೦ದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಶ್ರೀಗಳು ಬ್ರಹ್ಮಾವರ ದೇವಳದಿಂದ ಆಗಮಿಸಲಿದ್ದು ಶ್ರೀಗಳವರಿಗೆ ಪೂರ್ಣಕುಂಭ ಸ್ವಾಗತದೊ೦ದಿಗೆ ಸ್ವಾಗತಿಸಲಾಗುವುದು ನ೦ತರ ಶ್ರೀ ದೇವರ ಭೇಟಿ ಹಾಗೂ ಹತ್ತು ಸಮಸ್ತರಿಂದ ಶ್ರೀಗಳಿಗೆ ಪಾದಪೂಜೆನಡೆಯಲಿದೆ ಅನ೦ತರ ಶ್ರೀಗಳವರಿಂದ ಆಶೀರ್ವಾಚನ ಫಲಮಂತ್ರಕ್ಷತೆ ತದನಂತರ ಮುಂದಿನ ಮೊಕ್ಕಾಂಗೆ ಬೀಳ್ಕೊಡುವುದು.