ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಮಂಗಳೂರು : ಮೆತಫಿಟಮೈನ್, ಎಲ್‌ಎಸ್‌ಡಿ ಸ್ಟ್ಯಾಂಪ್ ಡ್ರಗ್ಸ್ ಮಾರಾಟ- ಇಬ್ಬರ ಬಂಧನ
ಮಂಗಳೂರು: ಡಿ 5: ನಿಷೇಧಿತ ಮಾದಕ ವಸ್ತುವಾದ ಮೆತಫಿಟಮೈನ್ ಮತ್ತು ಎಲ್‌ಎಸ್‌ಡಿ ಸ್ಟ್ಯಾಂಪ್ ಡ್ರಗ್ಸ್ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅರೋಪಿಗಳನ್ನು ಶಿಶಿರ ದೇವಾಡಿಗ ಹಾಗೂ ಶುಶಾನ್ ಎಲ್ ಎಂದು ಗುರುತಿಸಲಾಗಿದೆ. ಆರೋಪಿಗಳು ಉಳ್ಳಾಲ ತಾಲೂಕು ಪೆರ್ಮನ್ನೂರು ಗ್ರಾಮದ ಸಂತೋಷನಗರದ ಸಾರ್ವಜನಿಕ ರಸ್ತೆ ಬದಿಯಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು.
ಆರೋಪಿಗಳಿಂದ ಸುಮಾರು 132 ಗ್ರಾಂ ತೂಕದ ಮೆತಫಿಟಮೈನ್ ಡ್ರಗ್ಸ್ ಮತ್ತು 250 ಎಲ್‌ಎಸ್‌ಡಿ ಸ್ಟ್ಯಾಂಪ್ ಡ್ರಗ್ಸ್, 3,70,050 ರೂ. ಹಾಗೂ ಸ್ವಿಪ್ಟ್ ಕಾರು ಸೇರಿದಂತೆ ಒಟ್ಟು 14,01,050 ರೂ. ಸೊತ್ತುಗಳನ್ನು ವಶಪಡಿಸಲಾಗಿದೆ.
ಈ ದಾಳಿಯಲ್ಲಿ ಧನ್ಯ ಎನ್ ನಾಯಕ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪವಿಭಾಗದವರ ನೇತೃತ್ವದಲ್ಲಿ Anti-Drug Team ಪಿಎಸ್‌ಐ ಪುನಿತ್ ಗಾಂವ್‌ಕರ್, ಉಳ್ಳಾಲ ರಾಣಾ ಪಿಎಸ್‌ಐ, ಸಂತೋಷಕುಮಾರ್.ಡಿ. ಹಾಗೂ ಸಿಬ್ಬಂದಿಗಲಾದ ಸಾಜು ನಾಯರ್, ಮಹೇಶ್ ಕುಮಾರ್ , ಶಿವಕುಮಾರ್, ಅಕ್ಬರ್ ಯಡ್ರಾಮಿರವರು ಪಾಲ್ಗೊಂಡರು.