Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಹವಾಮಾನ ವೈಪರೀತ್ಯ: ಅರಬ್ಬಿ ಸಮುದ್ರಕ್ಕೆ ಇಳಿದಿದ್ದ 27 ಮೀನುಗಾರರಿದ್ದ ಬೋಟ್​ ನಾಪತ್ತೆ

ಉತ್ತರ ಕನ್ನಡ, ಡಿ. 05: ಹವಾಮಾನ ವೈಪರೀತ್ಯದಿಂದ (Weather extremes) 27 ಮೀನುಗಾರರಿದ್ದ (Fishers) ಗೋವಾ (Goa) ಮೂಲದ ಬೋಟ್ ಅರಬ್ಬಿ ಸಮುದ್ರದಲ್ಲಿ (Arabian Sea) ಕಾಣೆಯಾಗಿದೆ. ನವೆಂಬರ್​​ 29 ರಂದು ಗೋವಾದ ಪಣಜಿಯಿಂದ ಹೊರಟಿದ್ದ ಬೋಟ್ ಅಂಕೋಲ ತಾಲೂಕಿನ ಬೆಲೆಕೇರಿ ಸಮುದ್ರ ಭಾಗದಲ್ಲಿ ಕೊನೆಯ ಲೊಕೇಷನ್ ತೋರಿಸಿತ್ತು. ಇಂಜಿನ್‌ನಲ್ಲಿ ಸಮಸ್ಯೆಯಾಗಿ ಸಮುದ್ರದಲ್ಲಿ ಬೋಟ್‌ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೋಟ್‌ ಮಾಲೀಕ ಮಾಹಿತಿ ಕೋಸ್ಟ್‌ಗಾರ್ಡ್ಸ್‌ಗೆ ಮಾಹಿತಿ ನೀಡಿದ್ದಾರೆ.

ಕೋಸ್ಟ್​​ಗಾರ್ಡ್‌ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಮಿಚಾಂಗ್​ ಚಂಡಮಾರುತದ ಪರಿಣಾಮ ಸೋಮವಾರ ಚೆನ್ನೈನಲ್ಲಿ ಭಾರೀ ಮಳೆ ಸುರಿಯಿತು. ಅಲ್ಲದೆ ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹ ಉಂಟಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ತಮಿಳುನಾಡಿನ ಉತ್ತರ ಕರಾವಳಿ, ಆಂಧ್ರಪ್ರದೇಶ ಮತ್ತು ಯಾನಂನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಚಂಡಮಾರುತ ಇಂದು (ಡಿ.05) ಆಂಧ್ರಪ್ರದೇಶದ ಕಡೆಗೆ ಚಲಿಸಲಿದೆ.

ಮಿಚಾಂಗ್​ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೂ ಬೀರಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಕಳೆದ ಎರಡು ದಿನಗಳಿಂದ ತಂಪು ಗಾಳಿ ಬೀಸುತ್ತಿದೆ. ಜೊತೆಗೆ ಮೋಡ ಕವಿದ ವಾತಾವರಣೆವಿದೆ. ಬೆಂಗಳೂರಿನ ಸುತ್ತಮುತ್ತ ಮಂಗಳವಾರ ಮೋಡ ಕವಿದ ವಾತಾವರಣ ಇದೆ. ಕೆಲವಡೆ ಸಾಧಾರಣ ಮಳೆಯಾಗಲಿದೆ. ಬೆಳಗಿನ ಜಾವದಿಂದಲೇ ಮಂಜು ಮುಸುಕಿದ ವಾತಾವರಣ ಇದೆ. ಗರಿಷ್ಠ ಉಷ್ಣಾಂಶ 24 ಇದ್ದರೆ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್​ ಇರಲಿದೆ.

ಮಂಗಳವಾರ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನ ಬೀದರ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವಿದೆ. ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ವರುಣರಾಯ ಕೃಪೆ ತೋರಲಿದ್ದಾನೆ.

No Comments

Leave A Comment