ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಫಿಲಿಪ್ಪೀನ್ಸ್‌ನಲ್ಲಿ ಉಗ್ರರ ದಾಳಿ – ನಾಲ್ವರು ಮೃತ್ಯು, ಅನೇಕ ಮಂದಿಗೆ ಗಾಯ

ಮನಿಲಾ:ಡಿ 03, ಫಿಲಿಪ್ಪೀನ್ಸ್‌ನ ಮಿಂಡಾನಾವೋ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಬೆನ್ನಲ್ಲೇ ದಕ್ಷಿಣ ಫಿಲಿಪೈನ್ಸ್ ನಗರದ ಮರಾವಿಯಲ್ಲಿರುವ ವಿಶ್ವವಿದ್ಯಾನಿಲಯದ ಜಿಮ್ನಾಷಿಯಂನೊಳಗಿನ ರೋಮನ್ ಕ್ಯಾಥೋಲಿಕ್ ಮಾಸ್‌ನಲ್ಲಿ ಇಂದು ನಡೆದ ಉಗ್ರರ ದಾಳಿಗೆ ನಾಲ್ವರು ಸಾವನ್ನಪ್ಪಿ, ಅನೇಕ ಮದಿ ಗಾಯಗೊಂಡಿದ್ದಾರೆ.

2017 ರಲ್ಲಿ ಐದು ತಿಂಗಳ ಕಾಲ ಇಸ್ಲಾಮಿಕ್ ಸ್ಟೇಟ್ ಪರ ಉಗ್ರಗಾಮಿಗಳು ಮುತ್ತಿಗೆ ಹಾಕಿದ ನಗರವಾದ ಮರಾವಿಯಲ್ಲಿ ಸ್ಫೋಟ ನಡೆದಿದ್ದು, ಇಲ್ಲಿ ಹತ್ತಿರ ಶುಕ್ರವಾರ ಮಿಲಿಟರಿ ಕಾರ್ಯಾಚರಣೆಯಲ್ಲಿ 11 ಉಗ್ರರ ಹತ್ಯೆ ಗೈದ ನಂತರ ಕೃತ್ಯ ಎಸಗಲಾಗಿದೆ.

ಇನ್ನು ಫಿಲಿಪ್ಪೀನ್ಸ್‌ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಎಕ್ಸ್‌ನಲ್ಲಿ, ನಾಗರಿಕರ ರಕ್ಷಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪೀಡಿತ ಮತ್ತು ದುರ್ಬಲ ಸಮುದಾಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಪೊಲೀಸ್ ಮತ್ತು ಸಶಸ್ತ್ರ ಪಡೆಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

No Comments

Leave A Comment