ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಪರ್ಯಾಯೋತ್ಸವ ಎನ್ನುವುದು ಕೂಡ ಕೃಷ್ಣನ ಸೇವೆಯೇ-ಶ್ರೀಶ್ರೀ ಸುಗುಣೇಂದ್ರ ತೀರ್ಥರು

ಉಡುಪಿ:ಶ್ರೀ ಪುತ್ತಿಗೆ ಮಠದಲ್ಲಿ ನಡೆದ ಸ್ವಾಗತ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಶ್ರೀಸುಗುಣೇಂದ್ರ ತೀರ್ಥರು ಅತಿಥಿಗಳಾಗಿ ಬಂದ ಕೃಷ್ಣ ಭಕ್ತರಿಗೆ ಸಕಲ ಸೌಕರ್ಯಗಳನ್ನು ಒದಗಿಸಿ ಕೊಡುವುದು ಕೂಡ ಕೃಷ್ಣನಿಗೆ ಅತ್ಯಂತ ಪ್ರೀತಿಕರವಾದ ಸೇವೆಯೇ ಆಗಿದೆ. ಆದ್ದರಿಂದ ಕೃಷ್ಣ ಭಕ್ತರಾದ ತಾವೆಲ್ಲರೂ ಈ ಪರ್ಯಾಯೋತ್ಸವದಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡು ಶ್ರಿ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಿ ಎಂದು ಅನುಗ್ರಹ ಸಂದೇಶ ನೀಡಿದರು.

ಸಭೆಯ ಅಧ್ಯಕ್ಷರಾಗಿ ಕಾಪು ಶಾಸಕರಾದ ಹಾಗೂ ಸಮಿತಿಯ ಮಹಾಪೋಷಕರಾದ ಸುರೇಶ್ ಶೆಟ್ಟಿ ಗುರ್ಮೆರವರು ಪರ್ಯಾಯೋತ್ಸವಕ್ಕೆ ದಿನ ಗಣನೆ ಆರಂಭವಾಗಿದ್ದು. ನಾವೆಲ್ಲರೂ ಒಗ್ಗಟ್ಟಾಗಿ ಪುತ್ತಿಗೆ ಶ್ರೀಗಳ ಪರ್ಯಾಯವನ್ನು ವೈಭವದಿಂದ ನಡೆಸೋಣ ಎಂದು ತಿಳಿಸಿದರು.
ಪ್ರತಿ ಉಪಸಮಿತಿಯ ಸಂಚಾಲಕರಾದ ಎಂ ಎಲ್ ಸಾಮಗ, ಸುಪ್ರಸಾಡ್ ಶೆಟ್ಟಿ ಬೈಕಾಡಿ, ಜಯಕರ ಶೆಟ್ಟಿ ಇಂದ್ರಾಳಿ, ನಾಗೇಶ ಹೆಗ್ದೆ , ರಂಜನ್ ಕಲ್ಕೂರ ರವರು ತಮ್ಮ ಕರ್ತವ್ಯಗಳ ಸಿದ್ದತೆ ಬಗ್ಗೆ ವರದಿ ಒಪ್ಪಿಸಿದರು.

ಶ್ರೀ ಮಠದ ದಿವಾನರಾದ ನಾಗರಾಜ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತಾಡಿದರು. ಸಮಿತಿಯ ಪ್ರಸನ್ನ ಆಚಾರ್ಯ, ಮಟ್ಟಿ ಲಕ್ಷ್ಮೀನಾರಾಯಣ್ ರಾವ್, ಹರಿಯಪ್ಪ ಕೋಟ್ಯಾನ್, ಬಾಲಾಜಿ ಯೋಗೀಶ್ ಶೆಟ್ಟಿ, ಸಂತೋಷ್ ಶೆಟ್ಟಿ ತೆಂಕರಾಗುತ್ತು, ದಿನೇಶ್ ಪುತ್ರನ್, ಅಲ್ಲದೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಬೆಳಪು ದೇವಿ ಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು. ರಮೇಶ್ ಭಟ್ ಸ್ವಾಗತಿಸಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

kiniudupi@rediffmail.com

No Comments

Leave A Comment