Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಉಡುಪಿಯಲ್ಲಿ 536 ನೇ ಶ್ರೀಕನಕದಾಸರ ಜಯಂತಿ ಮಹೋತ್ಸವ ಸ೦ಪನ್ನ…

ಉಡುಪಿ:ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಗುರುವಾರದ೦ದು ಉಡುಪಿ ಜಿಲ್ಲಾ ಶ್ರೀಕನಕದಾಸ ಸಮಾಜ ಸಂಘ(ರಿ) ಉಡುಪಿ ಇವರ ಸಹಯೋಗದಲ್ಲಿ ಶ್ರೀಕನಕದಾಸರ 536 ನೇ ಜಯಂತಿ ಮಹೋತ್ಸವದ ಸಭಾಕಾರ್ಯಕ್ರಮವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟಿಸಿ ಪಾಳೇಗಾರರಾಗಿದ್ದ ತಿಮ್ಮಪ್ಪ ನಾಯಕ ಲೌಕಿಕ ಸುಖಗಳನ್ನು ತೊರೆದು ದೇವರ ದಾಸರಾಗಿ ದಾಸ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ತತ್ವಜ್ಞಾನಿ ಶ್ರೀಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿದ್ದು ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿಯ ಶ್ರೀಕೃಷ್ಣನ ಭಕ್ತರು ಎಂದು ಅನುಗ್ರಹ ಸಂದೇಶ ನೀಡಿದರು.

ಕೆ.ಕೃಷ್ಣಮೂರ್ತಿ ಆಚಾರ್ಯ,ಉಡುಪಿ ಜಿಲ್ಲಾ ಕಾ೦ಗ್ರೆಸ್ ನ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ಮತ್ತು ಇತರ ಸಮಾಜದ ವಿವಿಧ ಮುಖಂಡರು ಉಪಸ್ಥಿತರಿದ್ದರು.

No Comments

Leave A Comment