ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ಮಂಗಳೂರು: ನೈತಿಕ ಪೊಲೀಸ್ ಗಿರಿ – ಇಬ್ಬರ ಬಂಧನ
ಮಂಗಳೂರು:ನ 28: ಭಿನ್ನ ಕೋಮಿನ ಯುವಕ-ಯುವತಿ ಕೆಲಸ ಬಿಟ್ಟು ಜತೆಯಾಗಿ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ಹಿಂಬಾಲಿಸಿ ತಡೆದು ತರಾಟೆಗೆ ತೆಗೆದುಕೊಂಡು ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕಲ್ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ:
ಮಂಗಳೂರು ಮಂಕಿ ಸ್ಟ್ಯಾಂಡ್ ಬಳಿಯ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಭಿನ್ನ ಕೋಮಿನ ಜೋಡಿ ಕೆಲಸ ಬಿಟ್ಟು ನ. 27 ರಂದು ಸಂಜೆ 8 ಗಂಟೆ ವೇಳೆಯಲ್ಲಿ ಜತೆಯಾಗಿ ಬೈಕ್ ನಲ್ಲಿ ತೆರಳಿ ಮೊಬೈಲ್ ರಿಪೇರ್ ಮಾಡಿಸಿಕೊಂಡು ಮಿಲಗ್ರೆಸ್ ಚರ್ಚ್ ಕಡೆಯಿಂದ ಭಗಿನಿ ಸಮಾಜ ದ ಕಡೆಗೆ ಬೈಕ್ ನಲ್ಲಿ ಹೊರಟಿರುವಾಗ ಇದನ್ನ ನೋಡಿದ ಬಜರಂಗದಳ ಕಾರ್ಯಕರ್ತರು ಜೋಡಿಯನ್ನು ಹಿಂಬಾಲಿಸಿ ತಡೆದು ತರಾಟೆಗೆ ತೆಗೆದುಕೊಂಡಿತ್ತು.
ಸ್ವಲ್ಪ ಹೊತ್ತಿನಲ್ಲಿ 2 ಕೋಮಿನ ಯುವಕರು ಜಮಾಯಿಸಿದ್ದಾರೆ. ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದೆ. ಬಳಿಕ ಹೊಯ್ಸಳ ವಾಹನ ಪೊಲೀಸರು ಸ್ಥಳಕ್ಕೆ ಆಗಮಿಸಿ ಜೋಡಿಯನ್ನ ವಶಕ್ಕೆ ತೆಗೆದುಕೊಂಡು ಪಾಂಡೇಶ್ವರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.