ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

‘ಸುರಂಗದಲ್ಲಿರುವ ಕಾರ್ಮಿಕರಿಗೆ ಐ ಡ್ರಾಪ್ಸ್, ವಿಡಿಯೋ ಗೇಮ್ಸ್, ಚಲನಚಿತ್ರಗಳನ್ನು ನೀಡಲಾಗುತ್ತಿದೆ’

ಉತ್ತರಕಾಶಿ: ಉತ್ತರಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಿಂದ ಒಳಗಡೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದ್ದು, ಕಾರ್ಮಿಕರು ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳಲು ವೈದ್ಯರು ಮತ್ತು ಮನೋವೈದ್ಯರಿಂದ ಸಲಹೆ ನೀಡಲಾಗುತ್ತಿದೆ.

ಸಿಕ್ಕಿಬಿದ್ದ ಕಾರ್ಮಿಕರನ್ನು ನಿಯಮಿತವಾಗಿ ಪರೀಕ್ಷಿಸಲಾಗುತ್ತಿದೆ ಎಂದು ವೈದ್ಯಕೀಯ ತಂಡದ ಮತ್ತೊಬ್ಬ ಹಿರಿಯ ವೈದ್ಯ ಡಾ.ಪ್ರೇಮ್ ಪೋಖ್ರಿಯಾಲ್ ಅವರು ಹೇಳಿದ್ದಾರೆ.

“ಆರಂಭದಲ್ಲಿ, ನಾವು ಅವರಿಗೆ ಜ್ಯೂಸ್ ಮತ್ತು ಎನರ್ಜಿ ಡ್ರಿಂಕ್ಸ್ ನೀಡಿದ್ದೇವೆ. ಆದರೆ ಈಗ ಅವರಿಗೆ ಸರಿಯಾದ ಊಟ ಸಿಗುತ್ತಿದೆ. ನಾವು ಬೆಳಗ್ಗೆ ಬೇಯಿಸಿದ ಮೊಟ್ಟೆ, ಹಾಲು, ಚಹಾ ಮತ್ತು ದಾಲಿಯಾವನ್ನು ಕಳುಹಿಸುತ್ತೇವೆ ಮತ್ತು ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ದಾಲ್, ಅನ್ನ, ಚಪಾತಿ, ಸಬ್ಜಿಯನ್ನು ಕುಳುಹಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.

“ಅವರಿಗೆ ಒಆರ್‌ಎಸ್ ಪವರ್ ಕುಡಿಯಲು ಹೇಳಿದ್ದೇನೆ ಮತ್ತು ಅದನ್ನು ಈಗಾಗಲೇ ಕಳುಹಿಸಲಾಗಿದೆ. ಐ ಡ್ರಾಪ್ಸ್, ವಿಟಮಿನ್ ಮಾತ್ರೆಗಳು ಮತ್ತು ಇತರ ಶಕ್ತಿ ಪಾನೀಯಗಳನ್ನು ಸಹ ಅವರಿಗೆ ಕಳುಹಿಸಲಾಗಿದೆ” ಎಂದು ಡಾ ಪೋಖ್ರಿಯಾಲ್ ಅವರು ಹೇಳಿದ್ದಾರೆ.

ಅವರಿಗೆ ಟೂತ್‌ಪೇಸ್ಟ್, ಬ್ರಷ್, ಟವೆಲ್, ಬಟ್ಟೆ ಮತ್ತು ಒಳ ಉಡುಪುಗಳನ್ನು ಸಹ ಒದಗಿಸಲಾಗುತ್ತಿದೆ. ಚಲನಚಿತ್ರಗಳು ಮತ್ತು ವಿಡಿಯೋ ಗೇಮ್‌ಗಳನ್ನು ಒಳಗೊಂಡ ಮೊಬೈಲ್ ಫೋನ್‌ಗಳನ್ನು ಅವರಿಗೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನಾನು ಪ್ರತಿದಿನ ಅವರೊಂದಿಗೆ ಮಾತನಾಡುತ್ತೇನೆ  ಕಾರ್ಮಿಕರು ಒಳಗಡೆ ಯೋಗ, ವ್ಯಾಯಾಮ ಮಾಡಿ ಬೆಳಗ್ಗೆ ಮತ್ತು ಸಂಜೆ ಸುರಂಗದಲ್ಲಿ ವಾಕಿಂಗ್ ಮಾಡುತ್ತಾರೆ’’ ಡಾ.ಪ್ರೇಮ್ ಪೋಖ್ರಿಯಾಲ್ ಅವರು ಹೇಳಿದ್ದಾರೆ.

ಅವರು ಸಿಕ್ಕಿಬಿದ್ದಿರುವ ಸುರಂಗವೂ ಸುಮಾರು ಎರಡು ಕಿಲೋಮೀಟರ್‌ಗಳಷ್ಟು ಉದ್ದ ಇದ್ದು, ತಾಪಮಾನ 22 ಡಿಗ್ರಿ ಸೆಲ್ಸಿಯಸ್‌ನಿಂದ 24 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಸದ್ಯಕ್ಕೆ ಅವರಿಗೆ ಉಣ್ಣೆಯ ಬಟ್ಟೆಗಳ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

No Comments

Leave A Comment