ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

ಚೀನಾದಲ್ಲಿ ಎಚ್‌9ಎನ್‌2 ಸೋಂಕು :ಪೂರ್ವ ಸಿದ್ಧತೆಗೆ ಕೇಂದ್ರ ಸೂಚನೆ -ಕೋವಿಡ್‌-19 ಮಾದರಿಯಲ್ಲಿ ಮಾರ್ಗಸೂಚಿ

ನವದೆಹಲಿ:ನ 26: ಕೋವಿಡ್‌-19 ಬಳಿಕ ಚೀನಾದಲ್ಲಿ ಮಕ್ಕಳಲ್ಲಿ ಕಂಡುಬಂದಿರುವ ಉಸಿರಾಟದ ಸಮಸ್ಯೆ ಹಾಗೂ ಎಚ್‌9ಎನ್‌2(ಏವಿಯನ್‌ ಇನ್‌ಫ್ಲುಯೆಂಜಾ) ಸೋಂಕು ಏರಿಕೆ ಹಿನ್ನೆಲೆಯಲ್ಲಿ ನಮ್ಮಲ್ಲಿಯೂ ಪೂರ್ವ ಸಿದ್ಧತೆಯೊಂದಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ಈ ಬಗ್ಗೆ ಎಲ್ಲ ರಾಜ್ಯಗಳಿಗೆ ಪತ್ರ ಬರೆಯಲಾಗಿದ್ದು, ಕೂಡಲೇ ಎಲ್ಲ ಆಸ್ಪತ್ರೆಗಳಲ್ಲಿ ಇನ್‌ಫ್ಲೆಯೆಂಜಾ ಚಿಕಿತ್ಸೆಗೆ ಲಭ್ಯವಿರುವ ಹಾಸಿಗೆ, ಔಷಧ, ಚುಚ್ಚುಮದ್ದು, ಮೆಡಿಕಲ್‌ ಆಕ್ಸಿಜನ್‌, ಆಂಟಿಬಯೋಟಿಕ್ಸ್‌, ಪಿಪಿ ಕಿಟ್‌, ಟೆಸ್ಟಿಂಗ್‌ ಕಿಟ್‌, ಹಾಗೂ ಆಕ್ಸಿಜನ್‌ ಪ್ಲಾಂಟ್‌ಗಳಲ್ಲಿ ಅವುಗಳ ಲಭ್ಯತೆ ಹಾಗೂ ವೆಂಟಿಲೇಟರ್‌ಗಳು ಅಗತ್ಯದಷ್ಟು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಕೋವಿಡ್‌-19 ಮಾದರಿಯಲ್ಲಿ ಮಾರ್ಗಸೂಚಿಗಳನ್ನು ಕೂಡ ಸಿದ್ಧಪಡಿಸುವಂತೆ ಸಲಹೆ ನೀಡಲಾಗಿದೆ.

ಎಚ್‌9ಎನ್‌2 ಸೋಂಕು ಮಾರಣಾಂತಿಕವಲ್ಲವಾದರೂ ಬೆಳವಣಿಗೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಿಸಲು ದೇಶ ಸನ್ನದ್ಧವಾಗಿದೆ ಎಂದು ಕೇಂದ್ರ ತಿಳಿಸಿದೆ.

ಇನ್ನೊಂದೆಡೆ ಚೀನಾದ ಮಕ್ಕಳಲ್ಲಿ ಉಸಿರಾಟ ಸಮಸ್ಯೆಗಳು ಹೆಚ್ಚುತ್ತಿರುವುದು ಹಾಗೂ ಎಚ್‌9ಎನ್‌2 ಪ್ರಕರಣಗಳ ಏರಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

No Comments

Leave A Comment