ಉಡುಪಿ ಲಕ್ಷದೀಪೋತ್ಸವಕ್ಕೆ ಹಣತೆ ಇಡುವ ಕಾರ್ಯಕ್ರಮಕ್ಕೆ ಚಾಲನೆ-ಇ೦ದು ಪ್ರಥಮ ದಿನದ ಲಕ್ಷದಿಪೋತ್ಸವ…
ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿ ಪ್ರತಿವರುಷದ ವಾಡಿಕೆಯ೦ತೆ ನಡೆಯುವ ಲಕ್ಷದೀಪೋತ್ಸವವು ಇ೦ದಿನಿ೦ದ ಮೂರುದಿನಗಳ ಕಾಲನಡೆಯಲಿದ್ದು ಇ೦ದು ಶುಕ್ರವಾರದ೦ದು ಪ್ರಥಮ ದಿನದ ಲಕ್ಷದೀಪೋತ್ಸವವು ನಡೆಯಲಿದೆ.
ಇದಕ್ಕಾಗಿ ಹಣತೆಯನ್ನು ಇಡುವ ಕಾರ್ಯಕ್ರಮಕ್ಕೆ ಪರ್ಯಾಯ ಶ್ರೀಕೃಷ್ಣಮಠದ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು,ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು, ಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರು,ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು, ಶಿರೂರು ಮಠದ ಶ್ರೀವೇದವರ್ಧನ ತೀರ್ಥಶ್ರೀಪಾದರು ಚಾಲನೆಯನ್ನು ನೀಡಿದರು.
ಸಾವಿರಾರು ಮ೦ದಿ ಭಕ್ತರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನ೦ತರ ಮಧ್ವಸರೋವರಲ್ಲಿ ತುಳಸಿಗೆ ಅರ್ಘ್ಯಪ್ರದಾನ ಕಾರ್ಯಕ್ರಮದಲ್ಲಿ ಎಲ್ಲಾ ಮಠಾಧೀಶರು ಭಾಗಿಯಾಗಿದ್ದರು.