ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.

IND vs AUS, World Cup Final: ಕೈಯಲ್ಲಿ ಬಿಯರ್ ಬಾಟಲ್ ಹಿಡಿದು, ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್ ಮಾರ್ಷ್: ಮೈಚಳಿ ಬಿಡಿಸಿದ ಭಾರತೀಯರು

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ (Australia Cricket Team) ಚಾಂಪಿಯನ್ ಆಗಿ ಹೊರಹೊಮ್ಮಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್​ನಲ್ಲಿ ಭಾರತ ವಿರುದ್ಧ ಬ್ಯಾಟಿಂಗ್-ಬೌಲಿಂಗ್-ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಕಾಂಗರೂ ಪಡೆ ಆರನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿತು. ಟ್ರೋಫಿ ಗೆದ್ದ ಬಳಿಕ ಕೆಲ ಆಸ್ಟ್ರೇಲಿಯಾ ಆಟಗಾರರ ಸಂಭ್ರಮಾಚರಣೆ ಅತಿರೇಕಕ್ಕೇರಿದೆ. ಕೆಲ ಪ್ಲೇಯರ್ಸ್ ಟ್ರೋಫಿ ಜೊತೆ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಆದರೆ, ಆಸೀಸ್ ಆಟಗಾರ ಮಿಚೆಲ್ ಮಾರ್ಷ್ ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ಟ್ರೋಫಿಯ ಮೇಲೆ ಪಾದವನ್ನಿಟ್ಟು ಫೋಟೋ ತೆಗೆಸಿಕೊಂಡಿದ್ದಾರೆ.

ಮಿಚೆಲ್ ಮಾರ್ಷ್ ಅವರು ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು, ವಿಶ್ವಕಪ್ ಟ್ರೋಫಿಯ ಮೇಲೆ ಎರಡೂ ಕಾಲುಗಳನ್ನು ಇಟ್ಟು ಸೋಫ ಮೇಲೆ ವಿಶ್ರಾಂತಿ ಮಾಡುವುದನ್ನು ಕಾಣಬಹುದು. ಈ ಫೋಟೋವನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಮಾರ್ಷ್ ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಮಂದಿ ಮಾರ್ಷ್ ನಡೆಗೆ ಕಿಡಿ ಕಾರಿದ್ದು, ಟ್ರೋಫಿಗೆ ಈರೀತಿ ‘ಅಗೌರವ’ ತೋರುವುದು ಸರಿಯಲ್ಲ ಎಂದಿದ್ದಾರೆ. ಅಲ್ಲದೆ ಸಚಿನ್ ತೆಂಡೂಲ್ಕರ್ ಟ್ರೋಫಿಗೆ ಗೌರವ ನೀಡುವ ಫೋಟೋ ಹಂಚಿಕೊಂಡು ಮಾರ್ಷ್​ಗೆ ತಿರುಗೇಟು ನೀಡುತ್ತಿದ್ದಾರೆ.

“ಅದು ವಿಶ್ವಕಪ್, ಸ್ವಲ್ಪ ಗೌರವ ಕೊಡಿ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ವಿಶ್ವಕಪ್ ಟ್ರೋಫಿಗೆ ಸ್ವಲ್ಪ ಗೌರವ ತೋರಿಸಿ. ಈ ಟ್ರೋಫಿಯ ಮೌಲ್ಯದ ಬಗ್ಗೆ ಭಾರತೀಯ ಅಭಿಮಾನಿಗಳು ಅಥವಾ ಟೀಮ್ ಇಂಡಿಯಾವನ್ನು ಕೇಳಿ,”ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ, ವೈಯಕ್ತಿಕ ಕಾರಣಗಳಿಂದ ಮಾರ್ಷ್ ವಿಶ್ವಕಪ್‌ನ ಮಧ್ಯದಲ್ಲಿ ಮನೆಗೆ ಮರಳಿದ್ದರು. ಬಳಿಕ ”ನಾನು ಈ ವಿಶ್ವಕಪ್ ಗೆಲ್ಲಲು ಹಿಂತಿರುಗುತ್ತೇನೆ” ಎಂದು ಹೇಳಿ ತಂಡ ಸೇರಿಕೊಂಡಿದ್ದರು.

ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ವಿರುದ್ಧ ಗೆದ್ದು ಹೋಟೆಲ್​ಗೆ ತೆರಳಿದ ಬಳಿಕ ಈ ಫೋಟೋ ತೆಗೆಯಲಾಗಿದೆ ಎನ್ನಲಾಗಿದೆ. ಮಾರ್ಷ್ ಅವರು ತಮ್ಮ ಚಿನ್ನದ ಪದಕವನ್ನು ತೋರಿಸುವ ಜೊತೆಗೆ ಎರಡೂ ಕಾಲುಗಳನ್ನು ಟ್ರೋಫಿಯ ಮೇಲೆ ಇಟ್ಟಿದ್ದಾರೆ.

2023 ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿ ಆರನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅರ್ಧಶತಕಗಳ ಕೊಡುಗೆಯೊಂದಿಗೆ ಭಾರತ 240 ರನ್ ಗಳಿಸಿತು. ಆದಾಗ್ಯೂ, ಆಸ್ಟ್ರೇಲಿಯಾ ಟ್ರಾವಿಸ್ ಹೆಡ್ (137 ರನ್ಸ್) ಆಕರ್ಷಕ ಶತಕ, ತಂಡ ಗೆಲುವು ಸಾಧಿಸುವಂತೆ ಮಾಡಿತು. ಆಸ್ಟ್ರೇಲಿಯಾ ಇನ್ನೂ 42 ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿತು.

No Comments

Leave A Comment